Connect with us

    KARNATAKA

    ಮಂಗಳೂರು : ತಿರುಪತಿ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನೆಣ್ಣೆ: VHP ಖಂಡನೆ, CBI ತನಿಖೆಗೆ ಆಗ್ರಹ…!!

    ಮಂಗಳೂರು : ವಿಶ್ವವಿಖ್ಯಾತ ತಿರುಪತಿ ಪ್ರಸಾದ ( Tirupati Prasada laddu) ಲಡ್ಡುವಿನಲ್ಲಿ  ದನದ ಕೊಬ್ಬು, ಮೀನಿನೆಣ್ಣೆಇರುವ ಅಘಾತಕಾರಿ ಅಂಶ ಬಯಲಾಗಿದ್ದು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.

    ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದ ಈ ಪ್ರಕರಣವನ್ನು CBI ಮೂಲಕ ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿದೆ.  ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್  ಪ್ರಪಂಚದಾದ್ಯಂತ ತಿರುಪತಿ ವೆಂಕಟರಮಣನ ಮೇಲೆ ಅತೀವ ಭಕ್ತಿ ಭಾವ ಇದ್ದು ಅಲ್ಲಿಯ ಪ್ರಸಾದವನ್ನು ತಿರುಪತಿ ದೇವರ ಪ್ರತೀಕದಂತೆ ನೋಡುತ್ತಾರೆ. ಪ್ರಸಾದವನ್ನು ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು ಸಮಸ್ತ ಹಿಂದೂ ಸಮಾಜಕ್ಕೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ.
    ಇದಕ್ಕೆ ಕಾರಣಕರ್ತರಾಗಿದ್ದ ಹಿಂದಿನ ಮುಖ್ಯಮಂತ್ರಿ ಜಗನ್ ರವರ ಸರಕಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ಸಿ ಬಿ ಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಅಗ್ರಹಿಸುತ್ತದೆ. ಈ ವಿಚಾರವನ್ನು ಬೆಳಕಿಗೆ ತಂದಿರುವ ಹಾಗೂ ಬದಲಾವಣೆ ತಂದು ದೇವರಿಗೆ ಶುದ್ಧ ಲಾಡು ಅರ್ಪಿಸಲು ವ್ಯವಸ್ಥೆ ಮಾಡಿದ ಈಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ವಿಶ್ವ ಹಿಂದೂ ಪರಿಷದ್ ಸಲ್ಲಿಸುತ್ತದೆ ಎಂದು ಹೇಳಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply