LATEST NEWS
ಕಿನ್ನಿಗೋಳಿ – ಎರಡು ತಲೆಯ ಕರು ಸಾವು
ಮಂಗಳೂರು ಸೆಪ್ಟೆಂಬರ್ 20: ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬವರ ಮನೆಯಲ್ಲಿ ಸೆಪ್ಟೆಂಬರ್ 14ರಂದು ‘ಜನಿಸಿದ ದನದ ಎರಡು ತಲೆಯ ಕರು ಸಾವನಪ್ಪಿದೆ.
ಪಶು ವೈದ್ಯರು ಹಸುವಿನ ಹೆರಿಗೆ ಮಾಡಿಸಿದ್ದು ಎರಡು ತಲೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದ ಕರುವಿಗೆ ವೈದ್ಯರ ಸಲಹೆಯಂತೆ ಫೀಡಿಂಗ್ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿತ್ತು. ವೈದ್ಯರ ಸಲಹೆ ಪಡೆದು ತಲೆಯನ್ನು ಸರಿಪಡಿಸುವ ಸಾಧ್ಯತೆ ಬಗ್ಗೆ ವಿಚಾರಿಸಿದ್ದರು, ಆದರೆ ಅಸಾಧ್ಯವಾದ ಕಾರಣ ಯಾವುದಾದರು ಗೋ ಶಾಲೆಗೆ ನೀಡಲು ಯೋಚಿಸಿದ್ದರು. ಆದರೆ ಕರು ಗುರುವಾರ ಮೃತಪಟ್ಟಿದೆ. ಇಂತಹ ವಿಶೇಷತೆ ಹೊಂದಿದ ಕರು ಬದುಕುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ಐದಾರು ದಿನಗಳಷ್ಟೇ ಬದುಕಬಹುದು ಎಂದು ವೈದ್ಯರು ತಿಳಿಸಿದ್ದರು. 5 ವರ್ಷಗಳ ಹಿಂದೆ ಕತ್ತಲ್‌ಸಾರ್ ಎಂಬಲ್ಲಿ ಈ ರೀತಿಯ ಕರುವೊಂದು 40 ದಿನ ಬದುಕಿತ್ತು. ಇಂತಹ ಪ್ರಕರಣಗಳು ತೀರ ಅಪರೂಪವಾಗಿದೆ.
You must be logged in to post a comment Login