KARNATAKA
ಡ್ರಗ್ಸ್ ತನಿಖೆ – ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ದಿಢೀರ್ ವರ್ಗಾವಣೆ
ಮಂಗಳೂರು ಅಕ್ಟೋಬರ್ 2: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ದಿಢೀರ್ ವರ್ಗಾವಣೆ ಆಗಿದ್ದಾರೆ.
ಶಿವಪ್ರಕಾಶ್ ನಾಯ್ಕ್ ಅವರನ್ನು ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ಉಡುಪಿಯ ಕಾಪು ಠಾಣೆಯ ಸಿಐ ಆಗಿದ್ದ ಮಹೇಶ್ ಪ್ರಸಾದ್ ನೇಮಕವಾಗಿದ್ದಾರೆ. ಡ್ರಗ್ ಪೆಡ್ಲರ್ ಕಿಶೋರ್‌ನನ್ನು ಬಂಧಿಸಿದ್ದಕ್ಕೆ ಸಿಸಿಬಿ ಇನ್ಸ್‌ಪೆಕ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದ್ಯಾ ಎಂಬ ಅನುಮಾನ ಎದ್ದಿದೆ.
ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈಬಿಡಲು ಶಿವಪ್ರಕಾಶ್ ಮೇಲೆ ಒತ್ತಡ ಬಂದಿತ್ತು. ಕರಾವಳಿಯ ಪ್ರಭಾವಿ ಶಾಸಕರು ಬಂಧಿಸದಂತೆ ಒತ್ತಡ ಹೇರಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.
ರಾಜಕಾರಣಿಯ ಒತ್ತಡಕ್ಕೆ ಮಣಿಯದೇ ಕಿಶೋರ್‌ನನ್ನು ಶಿವಪ್ರಕಾಶ್ ನಾಯ್ಕ್ ಬಂಧಿಸಿದ್ದರು. ಈ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮತು ಮಂಗಳೂರು ಪೊಲೀಸ್ ವಲಯದಿಂದ ಕೇಳಿ ಬರುತ್ತಿದೆ.
ನಿರೂಪಕಿ ಅನುಶ್ರೀ ಹೆಸರು ಹೇಳಿದ್ದ ಡ್ಯಾನ್ಸರ್ ಕಿಶೋರ್ ರಕ್ಷಣೆಗೆ ಭಾರೀ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಡ್ಯಾನ್ಸರ್ ಕಿಶೋರ್ ಅರೆಸ್ಟ್ ಆದ ದಿನವೇ ದೊಡ್ಡ ಲಾಬಿ ನಡೆದಿತ್ತು. ಪ್ರಕರಣದಿಂದ ಕಿಶೋರ್‌ನನ್ನು ಕೈ ಬಿಡುವಂತೆ ಕರಾವಳಿಯ ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ.