Connect with us

    DAKSHINA KANNADA

    ಮಂಗಳೂರು : ಅಯೋಧ್ಯ ಶ್ರೀರಾಮನ ಅವಹೇಳನ, ಕ್ರೈಸ್ತ ಶಾಲಾ ಶಿಕ್ಷಕಿ ಮೇಲೆ ಕ್ರಮಕ್ಕೆ ಪೋಷಕರು ಹಿಂದೂ ಕಾರ್ಯಕರ್ತರ ಆಗ್ರಹ..!

    ಮಂಗಳೂರು: ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿಯಿಂದ ಅಯೋಧ್ಯ ರಾಮಂದಿರ ಮತ್ತು ಶ್ರೀರಾಮ ದೇವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದನ್ನು ಖಂಡಿಸಿ ಮಂಗಳೂರಿನಲ್ಲಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಖಾಸಾಗಿ ಶಾಲೆಗೆ ಮುತ್ತಿಗೆ ಹಾಕಿದ್ದಾರೆ.

     

    ಶಾಲಾ ಶಿಕ್ಷಕಿ ಪ್ರಭಾ ಎಂಬುವರು ಶ್ರೀ ರಾಮ ದೇವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಕುರಿತು ಪೋಷಕಿಯೊಬ್ಬರು ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಲು ವಿಶ್ವ ಹಿಂದೂಪರಿಷತ್ , ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದಾರೆ. ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ. ಮಕ್ಕಳಲ್ಲಿ ಧರ್ಮ ವಿರೋಧಿ ಚಿಂತನೆಯನ್ನು ಬಿತ್ತುತ್ತಿದ್ದಾರೆ. ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮಕೈಗೊಳ್ಳಬೇಕೆಂದು ವಿಎಚ್ ಪಿ ಪ್ರಾಂತ ಸಹಸಂಯೋಜಕ್ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.


    ಇನ್ನು ಈ ವಿಚಾರವಾಗಿ ಶಾಲೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಶಾಲಾ ಹೆಡ್ ಮಾಸ್ಟರ್ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಡೆಸಿ ವಾಪಾಸ್ ಆಗುವ ವೇಳೆ ಐವನ್ ಡಿಸೋಜಾರ ಕಾರನ್ನು ತಡೆದು ಶಿಕ್ಷಕಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಐವನ್ ಜೊತೆ ಪೋಷಕರು, ಹಿಂದೂ ಕಾರ್ಯಕರ್ತರು ವಾಗ್ವಾದ ನಡೆಸಿದರು. ಈ ಸಂದರ್ಭ ತಡೆಯಲು ಬಂದ ಪೊಲೀಸರ ವಿರುದ್ದವೂ ಕಾರ್ಯಕರ್ತರ ಅಸಮಾಧಾನ ಹೊರಹಾಕಿದಾಗ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *