Connect with us

    DAKSHINA KANNADA

    ಪುತ್ತೂರಿನಲ್ಲಿ ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್ ಅಭಿಮಾನಿಗಳ ಪೂರ್ವಭಾವಿ ಸಭೆ

    ಪುತ್ತೂರು ಫೆಬ್ರವರಿ 10 : ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಸಭೆಗಳು ನಡೆಯಲಾರಂಭಿಸಿದೆ. ಈ ನಡುವೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯ ಲೋಕಸಭಾ ಟಿಕೆಟ್ ಗೆ ಬಿಜೆಪಿ ಅಭ್ಯರ್ಥಿಯಾಗಿ ಸತ್ಯಜಿತ್ ಸುರತ್ಕಲ್ ಗೆ ಅವಕಾಶ ನೀಡಬೇಕೆಂದು ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್ ಎಂಬ ಹೆಸರಿನಲ್ಲಿ ಅಭಿಮಾನಿಗಳ ಸಭೆ ನಡೆಯುತ್ತಿದೆ.


    ಪುತ್ತೂರಿನಲ್ಲಿ ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್’ ಎಂಬ ಹೆಸರಿನಲ್ಲಿ ಪುತ್ತೂರು ತಾಲ್ಲೂಕಿನ ಅಭಿಮಾನಿ ಬಳಗದ ವತಿಯಿಂದ ನಡೆದ ಪೂರ್ವಭಾವಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಕಲ್ ಕಾರ್ಯಕರ್ತರ ಒತ್ತಡದಂತೆ ಹಿಂದುತ್ವವಾದಿ ಹೋರಾಟಗಾರರಿಗೆ ನ್ಯಾಯ ಸಿಗಬೇಕು. ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಅವಕಾಶ ಸಿಗಬೇಕು ಎಂಬ ಅಭಿಮಾನಿಗಳು, ಲೋಕಸಭಾ ಸ್ಥಾನಕ್ಕೆ ಅವಕಾಶ ನೀಡುವಂತೆ ಹೋರಾಟ ನಡೆಸುತ್ತಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

    37 ವರ್ಷಗಳಿಂದ ಸಂಘ, ಸಂಘಟನೆ, ಪಕ್ಷ ಎಂದು ಜೀವನ ಮುಡಿಪಾಗಿಟ್ಟಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಆದರೆ, ನನ್ನನ್ನು ಹೊರ ಹಾಕುವ ಪ್ರಯತ್ನ ನಡೆಯಿತು. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಯಿತು. ಆದರೂ ನಾನು ಪಕ್ಷದ ಕುರಿತು ಯಾವುದೇ ಆರೋಪ ಮಾಡಿಲ್ಲ. ಹೀಗಿದ್ದರೂ ಸತ್ಯ ಮಾಡಿದ ತಪ್ಪಾದರೂ ಏನು’ ಎಂದು ಅವರು ಬಿಜೆಪಿಗರನ್ನು ಪ್ರಶ್ನಿಸಿದರು. ಸಂಸದ ಸ್ಥಾನ 2–3 ಸಲದ ನಂತರ ಬದಲಾವಣೆ ಆಗುತ್ತದೆ. ಕಾರ್ಯಕರ್ತರ ಆಧಾರದಲ್ಲಿ ಸಂಘದ ವ್ಯವಸ್ಥೆಯಲ್ಲಿರುವ ಜಿಲ್ಲೆಯಲ್ಲಿ ಈಗಿರುವ ಸಂಸದರಿಗೆ ಮೂರು ಬಾರಿ ಅವಕಾಶ ಸಿಕ್ಕಿದೆ. ಹಾಗಾಗಿ ಈ ಬಾರಿ ಬದಲಾವಣೆ ಆಗಬೇಕು. 2ನೇ ಬಾರಿಗೆ ಅವರಿಗೆ ಅವಕಾಶ ನೀಡುವ ವೇಳೆ ಗೊಂದಲ ಉಂಟಾದಾಗ ಸಂಘದ ಜವಾಬ್ದಾರಿ ನೆಲೆಯಲ್ಲಿ ಪರಿಹಾರ ಮಾಡಲು ನಾನು ಹೋಗಿದ್ದೆ’ ಎಂದರು.

    ಹಿಂದು ಪರ ಸಂಘಟನೆ ಪಕ್ಷದ ನಿಷ್ಟಾವಂತ ಕೆಲಸ ಮಾಡಿರುವುದು ತಪ್ಪಾ ಎಂದು ಪ್ರಶ್ನಿಸಿದ ಸತ್ಯಜಿತ್ ಸುರತ್ಕಲ್ ಅವರು ಹಿಂದು ಪರ ಹೋರಾಟ ಮಾಡುವ ಸಂದರ್ಭದಲ್ಲಿ ನಾಯಕರೆಂದು ಹೇಳಿಕೊಳ್ಳುವವರು ಅನೇಕ ಘಟನೆಗಳಲ್ಲಿ ಕಲ್ಲುತೂರಾಟ ಆಗುತ್ತದೆ ಎಂದು ಹಿಂದೆ ಸರಿಯುವವರಿದ್ದಾರೆ. ಆದರೆ ಇವೆಲ್ಲವನ್ನು ಮೆಟ್ಟಿ ಅಂದು ಹೋರಾಟಕ್ಕೆ ದುಮುಕ್ಕಿದ್ದೇನೆ. ಹಾಗಾಗಿ ನನ್ನ ಜೊತೆ ಹಿಂದೆ ಹೋರಾಟದಲ್ಲಿ ತೊಂದರೆ ಅನುಭವಿಸಿದವರು, ಸಮಸ್ಯೆಯಲ್ಲಿರುವವರು ಇವತ್ತಿಗು ನನ್ನನ್ನು ನೆನಪು ಮಾಡಿ ಕರೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಪಕ್ಷ ಮಾತ್ರ ನನ್ನನ್ನು ನೆನಪು ಮಾಡುತ್ತಿಲ್ಲ. ಯಾಕೆ ನಾನು ಪಕ್ಷಕ್ಕೆ ಬರಬಾರದು ಎಂದು ಇವತ್ತಿಗೂ ಹೇಳಿಲ್ಲ. ನನ್ನಿಂದ ಏನು ತಪ್ಪಾಗಿದೆ. ಒಂದು ವೇಳೆ ನನ್ನಿಂದ ತಪ್ಪಾಗಿದೆ ಎಂದು ಹೇಳಲಿ. ಆಗ ನಾನು ಸಾಮಾನ್ಯ ಕಾರ್ಯಕರ್ತನಾಗಿ ಬಂದು ಕೆಲಸ ಮಾಡುತ್ತೇನೆ ಎಂದಿದ್ದೆ. ಆದರೆ ಅದಕ್ಕೂ ಕಳೆದ 6 ವರ್ಷಗಳಿಂದ ಇವತ್ತಿನ ತನಕ ಉತ್ತರ ಸಿಕ್ಕಿಲ್ಲ ಎಂದು ಹೇಳಿಕೊಂಡರು.

    ಸಾಮಾಜಿಕ ಹೋರಾಟಗಾರ ಸುದರ್ಶನ್ ಪುತ್ತೂರು ಅವರು ಮಾತನಾಡಿ ನಮ್ಮ ನಾಯಕ ನರೇಂದ್ರ ಮೋದಿಯೇ ಆಗಿದ್ದಾರೆ. ಆದರೆ ಹಿಂದು ಸಂಘಟನೆ ಬೇರೆ ಬೇರೆ ಸಂಘಟನೆಯಾಗಿ ಒಡಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅನ್ಯಾಯ ಆಗಿದೆ ಎಂದು ಅವರನ್ನು ಬೆಂಬಲಿಸಿದ್ದೆ. ಅದೇ ರೀತಿ ವಂಚಿತರಾದವರಲ್ಲಿ ಸತ್ಯಜಿತ್ ಸುರತ್ಕಲ್ ಕೂಡಾ ಒಬ್ಬರು. ಬಿಜೆಪಿಯಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಲಿಲ್ಲ. ಕಳೆದ ವಿಧಾನಸಭೆಯಲ್ಲಿ ಸಂಜೀವ ಮಠಂದೂರು ಅವರಿಗೆ ಅವರ ಜಾತಿಯವರೇ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿಯಿಂದ ಮನನೊಂದವರು ಹಲವಾರು ಮಂದಿ ಇದ್ದಾರೆ. ಹಾಗಾಗಿ ಈ ಭಾರಿ ಹೊಸ ವ್ಯಕ್ತಿಗೆ ಅವಕಾಶ ಕೊಡಬೇಕು. ಯಾರನ್ನೋ ತಂದು ಅದು ಹೈಕಮಾಂಡ್ ತೀರ್ಮಾನ ಎಂದು ಒತ್ತಡ ಹಾಕಬಾರದು. ಅವರ ಬದಲು ಸತ್ಯಜಿತ್ ಸುರತ್ಕಲ್ ಅವರಿಗೆ ಲೋಕಸಭಾ ಅಭ್ಯರ್ಥಿ ಸ್ಥಾನ ಕೊಡಬೇಕೆಂದು ಆಗ್ರಹ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply