LATEST NEWS
ಸೈಲೆಂಟ್ ಆಗಲಿದೆ ಮಂಗಳೂರು ವಿಮಾನ ನಿಲ್ದಾಣ

ಸೈಲೆಂಟ್ ಆಗಲಿದೆ ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ಡಿಸೆಂಬರ್ 15: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ನಿಶ್ಯಬ್ದ ವಲಯ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣವನ್ನು ನಿಶ್ಯಬ್ದ ನಿಲ್ದಾಣ ಎಂದು ಘೋಷಿಸಿದೆ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾದಲ್ಲಿ ಯಾವುದೇ ಘೋಷಣೆಗಳು ಇರುವುದಿಲ್ಲ.
ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಘೋಷಣೆಗಳು ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇರುವುದಿಲ್ಲ.

ಆದರೆ ಅಂಗವಿಕಲ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಧಿಕಾರ ತಿಳಿಸಿದೆ.
ಪ್ರಯಾಣಿಕರಿಗೆ ಪ್ರಶಾಂತ ರೀತಿಯ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜನವರಿ 2, 2018 ರಿಂದ ಈ ಆದೇಶ ಅನುಷ್ಠಾನಗೊಳ್ಳಲಿದೆ.
ವಿಮಾನ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿಸುವ ಮತ್ತೊಂದು ಕ್ರಮವಾಗಿ ಕೈ ಚೀಲಕ್ಕೆ ಮುದ್ರೆ ಹಾಕುವುದು ಹಾಗೂ ಟ್ಯಾಗ್ ಹಾಕುವುದನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 15 ರಿಂದ ರದ್ದುಗೊಳಿಸಲಾಗುತ್ತಿದೆ.
ಉಡ್ಡಯನ ಪೂರ್ವ ತಪಾಸಣಾ ಕೇಂದ್ರಗಳಲ್ಲಿ ಇನ್ನು ಮುಂದೆ ಮುದ್ರೆ ಹಾಕಲಾಗುವುದಿಲ್ಲ.