LATEST NEWS
ಸ್ವಚ್ಚತೆಯಲ್ಲಿ ದೇಶಕ್ಕೆ ಪ್ರಥಮ ಮಂಗಳೂರು ವಿಮಾನ ನಿಲ್ದಾಣ
ಸ್ವಚ್ಚತೆಯಲ್ಲಿ ದೇಶಕ್ಕೆ ಪ್ರಥಮ ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ಎಪ್ರಿಲ್ 1: ದೇಶದ ವಿಮಾನ ನಿಲ್ದಾಣಗಳಲ್ಲಿ ನಡೆಸಲಾದ ಸ್ವಚ್ಚತಾ ಸಮೀಕ್ಷೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಸ್ವಚ್ಚತೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದೆ.
ದೇಶದ ಸಣ್ಣ ವಿಮಾನಗಳ ಕೆಟಗರಿಯಲ್ಲಿ ಮಂಗಳೂರ ವಿಮಾನ ನಿಲ್ದಾಣ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದೇಶದಲ್ಲಿ ಸುಮಾರು 55 ಸಣ್ಣ ವಿಮಾನ ನಿಲ್ದಾಣಗಳಲ್ಲಿನ ಸ್ವಚ್ಚತೆ ಬಗ್ಗೆ ಸಮೀಕ್ಷೆಯನ್ನು ಭಾರತೀಯ ವಿಮಾನ ಪ್ರಾಧಿಕಾರ ನಡೆಸಿತ್ತು. ಇದರಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಥಮ ಸ್ಥಾನ ಪಡೆದಿದ್ದು, ಕೇರಳದ ತಿರುವನಂತಪುರ ವಿಮಾನ ನಿಲ್ದಾಣ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದೆ.
ಇಂದು ನವದೆಹಲಿಯಲ್ಲಿ ನಡೆಯುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ 23 ನೇ ವಾರ್ಷಿಕ ದಿನಾಚರಣೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ ರಾವ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
You must be logged in to post a comment Login