KARNATAKA
ಮಂಗಳೂರು: ಉಗ್ರ ಸಂಘಟನೆ ‘ಹಮಾಸ್’ ಪರ ವಿಡಿಯೋ ಮಾಡಿ ವೈರಲ್ ಮಾಡಿದ್ದ ಝಾಕೀರ್ ಬಂಧನ..!
ಉಗ್ರ ಸಂಘಟನೆ ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿದ್ದ ಮಂಗಳುರು ಬಂದರು ನಿವಾಸಿ ಝಾಕೀರ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು : ಉಗ್ರ ಸಂಘಟನೆ ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿದ್ದ ಮಂಗಳುರು ಬಂದರು ನಿವಾಸಿ ಝಾಕೀರ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈತನ ಕೃತ್ಯದಿಂದ ಸಮಾಜದಲ್ಲಿ ಕೋಮು ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿದ್ದರಿಂದ ಮಂಗಳೂರು ಬಂದರು ಠಾಣಾ ಸಬ್ ಇನ್ಸ್ಪೆಕ್ಟರ್ ವಿನಾಯಕ ತೋರಗಲ್ ಅವರು ಸ್ವಪ್ರೇರಿತಾ ದೂರು ದಾಖಲಿಸಿದ ಆರೋಪಿ ಝಾಕೀರ್ನನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಝಾಕೀರ್ ಮೇಲೆ ಈ ಹಿಂದೆ ಕೂಡ ಬಂದರು ಠಾಣೆಯಲ್ಲಿ ದಾಖಲಾದ 7 ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ಯಾಲೆಸ್ಟಿನ್ ಮತ್ತು ಇಸ್ರೇಲ್ ಮಧ್ಯೆ ಪ್ರಸ್ತು ಯುದ್ದ ನಡೆಯುತ್ತಿದ್ದು ಇದರಲ್ಲಿ ಇಸ್ರೇಲ್ ವಿದ್ದು ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಎಲ್ಲರೂ ದುವಾ ಮಾಡಬೇಕೆಂದಯ ಝಾಕೀರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ,
ಇದಕ್ಕೆ ಹಿಂದೂ ಪರ ಸಂಘಟನೆಗಳು ಮತ್ತು ಇತರರಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯ ಮಾಡಲಾಗಿ ದೂರು ಕೂಡ ದಾಖಲಾಗಿತ್ತು.