DAKSHINA KANNADA
ಮಂಗಳೂರು : ತಾಯಿಯನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿ ರೇಣುಕಾ ಹೋದದಾದ್ರು ಏಲ್ಲಿ..!!?
ಮಂಗಳೂರು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತನ್ನ ತಾಯಿಯನ್ನು ಸೇರಿಸಲು ಬಂದಿದ್ದ ಯುವತಿಯೊಬ್ಬಳು ಆಸ್ಪತ್ರೆಯಿಂದಲೇ ಕಾಣೆಯಾಗಿದ್ದಾಳೆ. ಮಂಗಳೂರು ಹೊರವಲಯದ ವಾಮಂಜೂರು ಪಡ್ಡಾಯಿಬೆಟ್ಟು ಕೆಲರೈ ಕೋಡಿ ನಿವಾಸಿ ರೇಣುಕಾ ದೇವಿಂದ್ರಪ್ಪ ಏರಿಮನಿ (29) ನಾಪತ್ತೆಯಾದ ಯುವತಿಯಾಗಿದ್ದಾಳೆ.
mMgLUru
ರೇಣುಕಾ ಎಲ್‌ಎಲ್‌ಬಿ ಮುಗಿಸಿದ್ದು, ಮಂಗಳೂರು ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡಿದ್ದರು. ಅ. 28ರಂದು ಬೆಳಗ್ಗೆ 9.30ಕ್ಕೆ ತಾಯಿ ನೀಲವ್ವ ದೇವಿಂದ್ರಪ್ಪ ಏರಿಮನಿ ಅವರನ್ನು ವೆನ್ಲಾಕ್‌ಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. 10 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಚೀಟಿ ಮಾಡಿಸುವ ವೇಳೆ ರೇಣುಕಾ ಅವರು ವಾಶ್ ರೂಂಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ವಾಪಾಸು ಬಂದಿಲ್ಲ. ಎನ್ನಲಾಗಿದೆ. ಆಸ್ಪತ್ರೆ ಸುತ್ತಮುತ್ತ ಹಾಗೂ ನೆರೆಕರೆಯವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಿದರೂ ಪತ್ತೆಯಾಗಿಲ್ಲ. 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಪಿಂಕ್ ಬಣ್ಣದ ಚೂಡಿದಾರ, ಕಪ್ಪು ಬಣ್ಣದ ವೇಲ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.