Connect with us

DAKSHINA KANNADA

ಉಪೇಂದ್ರರ UI ರಿಲೀಸ್‌ಗೆ ಡೇಟ್ ಫಿಕ್ಸ್, ಚಿತ್ರ ತಂಡದೊಂದಿಗೆ ಕಟೀಲು ದೇವಿಯ ದರ್ಶನ ಪಡೆದ ರಿಯಲ್ ಸ್ಟಾರ್..!

ಕನ್ನಡ ಸಿನಿಮಾ ಲೋಕದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ನಟನೆಯ ಭಾರಿ ನಿರೀಕ್ಷೆಯ UI  ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದ್ದು ಡಿಸೆಂಬರ್ 20 ಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಹಿನ್ನೆಲೆ ಉಪ್ಪಿ ಅವರು ಮಂಗಳವಾರ  U I  ಸಿನಿಮಾ ತಂಡದೊಂದಿಗೆ  ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಚಿತ್ರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.

ಮಂಗಳೂರು : ಕನ್ನಡ ಸಿನಿಮಾ ಲೋಕದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ನಟನೆಯ ಭಾರಿ ನಿರೀಕ್ಷೆಯ UI  ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದ್ದು ಡಿಸೆಂಬರ್ 20 ಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಹಿನ್ನೆಲೆ ಉಪ್ಪಿ ಅವರು ಮಂಗಳವಾರ  U I  ಸಿನಿಮಾ ತಂಡದೊಂದಿಗೆ  ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಚಿತ್ರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.

ದೇವಳದ ವತಿಯಿಂದ ಉಪ್ರೇಂದ್ರ ಅವರನ್ನು ಗೌರವಿಸಲಾಯಿತು. ದೇವಳದ ಕಾರ್ಯವೈಕರಿ, ಶಿಕ್ಷಣ ಸಂಸ್ಥೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಕ್ಯಾಪ್ಸ್ ಪೌಂಡೇಶನ್ ನ ಕಾಟನ್ ಬ್ಯಾಗ್ ನ್ನು ಅಭಿಮಾನಿಗಳಿಗೆ ವಿತರಿಸಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇದಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ಕ್ಯಾಪ್ಸ್ ಫೌಂಡೇಷನ್‌ ನ ಸಮಾಜ‌ಮುಖಿ ಕೆಲಸಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪೇಂದ್ರ ಜೊತೆ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಲಹರಿ ವೇಲು ಹಾಗೂ ನವೀನ್ ಮನೋಹರನ್ ಕೂಡ ದೇವರ ದರ್ಶನ ಪಡೆದರು. ಇದೇ ವೇಳೆ ಉಪೇಂದ್ರ ಜೊತೆಗಿನ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.

ಬಳಿಕ ಕೊರಗಜ್ಜದ ದರ್ಶನ ಪಡೆದುಕೊಂಡು ಸಂಜೆ ಮಂಗಳೂರಿನಲ್ಲಿ UI ಸಿನೆಮಾದ ಬಗ್ಗೆ ಉಪೇಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿಕೊಟ್ಟರು. 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ.

ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *