LATEST NEWS
ಮಂಗಳೂರಲ್ಲಿ ಉಗ್ರ ಗೋಡೆ ಬರಹಕ್ಕೆ ಉಗ್ರ ಸಂಘಟನೆ ಸ್ಲೀಪರ್ ಸೆಲ್ ಸಹಕಾರ….!!

ಮಂಗಳೂರು ಡಿಸೆಂಬರ್ 16: ಮಂಗಳೂರು ನಗರದಲ್ಲಿ ಕಾಣಿಸಿಕೊಂಡಿದ್ದ ಉಗ್ರ ಸಂಘಟನೆ ಪರ ಗೋಡೆ ಬರಹದ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಈ ಪ್ರಕರಣ ಎನ್ಐಎ ತನಿಖೆಗೆ ಒಪ್ಪಿಸುವ ಸಾಧ್ಯತೆ ದಟ್ಟವಾಗಿದೆ.
ಕಳೆದ ನವೆಂಬರ್ 27 ರಂದು ಮಂಗಳೂರಿನ ಬಿಜೈ ಹಾಗೂ ನವೆಂಬರ್ 30 ರಂದು ಕೋರ್ಟ್ ರಸ್ತೆಯಲ್ಲಿ ವಿವಾದಿತ ಗೋಡೆ ಬರಹ ಪತ್ತೆಯಾಗಿತ್ತು. ಒಂದು ಗೋಡೆ ಬರಹದಲ್ಲಿ ಉಗ್ರ ಸಂಘಟನೆ ಲಷ್ಕರ್ ಉಗ್ರ ಪರವಾದ ಗೋಡೆ ಬರಹ ಇದ್ದರೆ, ಇನ್ನೊಂದರಲ್ಲಿ ಮುಸ್ಲೀಂ ಧರ್ಮದ ಪರವಾಗಿ ಬರೆಯಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಪೊಲೀಸರ ತಂಡ ಪ್ರಕರಣದ ಆರೋಪಿಗಳಿಗೆ ಸಂಘಟನೆಯೊಂದರ ಸ್ಲೀಪರ್ ತಂಡ ಸಹಕಾರ ನೀಡಿರುವುದು ತನಿಖೆಯಿಂದ ಬಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಶಾರೀಶ್ ಮತ್ತು ಮಾಝ್ ಮುನೀರ್ ಸಾಮಾಜಿಕ ಜಾಲತಾಣ ಮುಖೇನ ವಿವಿಧ ಮತಾಂಧ ಸಂಘಟನೆಗಳ ಜೊತೆ ನಂಟು ಹೊಂದಿದ್ದಲ್ಲದೆ, ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಸುಂಚು ರೂಪಿಸಿರುವುದಾಗಿ ತಿಳಿದುಬಂದಿದೆ.
ಬಂಧಿತರು ಸ್ಥಳೀಯ ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂ.ಟೆಕ್ ಮಾಡುತ್ತಿದ್ದು ಮುನೀರ್, ಆರ್ಯ ಸಮಾಜ ರಸ್ತೆಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದನು. ಆಗಾಗ ಮಂಗಳೂರಿಗೆ ಮಹಮ್ಮದ್ ಶಾರೀಕ್ ಬರುತ್ತಿದ್ದ, ಈ ಇಬ್ಬರಿಗೂ ಉಗ್ರ ಸಂಘಟನೆಗಳ ಟಚ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗೋಡೆ ಬರಹ ಪ್ರಕರಣದ ಮೂರನೇ ಆರೋಪಿ ಸಾದತ್ ಎಂಬಾತನನ್ನು ಮಂಗಳವಾರ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗೋಡೆ ಪ್ರಕರಣದ ಪ್ರಮುಖ ಆರೋಪಿ ಗಳಾದ ತೀರ್ಥಹಳ್ಳಿ ನಿವಾಸಿಗಳಾದ ಮಹಮ್ಮದ್ ಶಾರೀಕ್, ಮಾಝ್ ಮುನೀರ್ ಅಹಮ್ಮದ್ ಯಾನ ಮುನೀರ್ ಈ ಹಿಂದೆಯೇ ಬಂಧಿಸಲಾಗಿದ್ದು, ಅವರು 10 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.