Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆ ಗ್ರಾಮ ಪಂಚಾಯತ್ ಚುನಾವಣೆ ಮೊದಲನೇ ಹಂತ – 3,854 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು, ಡಿಸೆಂಬರ್ 16 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ನಡೆಯುವ ಮೊದಲನೇ ಹಂತದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಒಟ್ಟು 3854 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಗಳೂರು 37, ಮೂಡಬಿದಿರೆ 12, ಮತ್ತು ಬಂಟ್ವಾಳ 57 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 106 ಗ್ರಾಮಪಂಚಾಯತ್‍ಗಳ 1681 ಕ್ಷೇತ್ರಗಳಲ್ಲಿ 50 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ 1631 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.


ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ವರ್ಗವಾರು ಸಂಖ್ಯಾ ವಿವರ: ಅನುಸೂಚಿತ ಜಾತಿಯಲ್ಲಿ ಒಟ್ಟು 238, ಅನುಸೂಚಿತ ಪಂಗಡದಲ್ಲಿ ಒಟ್ಟು 215 ಹಾಗೂ ಹಿಂದುಳಿದ ಅ ವರ್ಗದಲ್ಲಿ 958, ಹಿಂದುಳಿದ ಬಿ ವರ್ಗದಲ್ಲಿ ಒಟ್ಟು 226. ಸಾಮಾನ್ಯ 2,217, ಒಟ್ಟು 3,854 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.