ಮಂಗಳೂರು, ಡಿಸೆಂಬರ್ 16 : ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಅಡ್ಡೂರಿನಲ್ಲಿ ನಡೆದಿದೆ. ತಲವಾರು ದಾಳಿಗೆ ಒಳಗಾದ ಯುವಕನನ್ನು ಅಡ್ಡೂರು ನಿವಾಸಿ ಮಹಮ್ಮದ್ ತಾಜುದ್ದೀನ್ ಎಂದು ಗುರುತಿಸಲಾಗಿದೆ.

ಮಹಮ್ಮದ್ ತಾಜುದ್ದೀನ್ ಅಡ್ಡೂರಿನಿಂದ ಮನೆ ಕಡೆ ತೆರಳುವ ವೇಳೆ ಮೂರು ಮಂದಿಯ ತಂಡ ತಾಜುದ್ದೀನ್ ಮೇಲೆ ತಲವಾರು ದಾಳಿ ನಡೆಸಿದೆ. ಪರಿಣಾಮ ಯುವಕನ ತೊಡೆ ಭಾಗ, ಕೈ ಸಹಿತ ವಿವಿಧೆಡೆ ಗಾಯಗಳಾಗಿವೆ. ದಾಳಿಯಿಂದ ಗಾಯಗೊಂಡಿರುವ ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆಯ ವೈಷಮ್ಯದಿಂದಲೇ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.