LATEST NEWS
ಮಂಗಳೂರಿನಲ್ಲಿ ಕದ್ದ ಕಾರು ಮುಲ್ಕಿಯಲ್ಲಿ ಬಿಟ್ಟು ಹೋದ ಕಳ್ಳರು
ಮುಲ್ಕಿ, ಜುಲೈ 9: ಮಂಗಳೂರಿನಲ್ಲಿ ಕಳ್ಳತನ ಮಾಡಿ ನಾಪತ್ತೆಯಾಗಿದ್ದ ಕಳ್ಳರ ಗ್ಯಾಂಗ್ ಮನೆಯಿಂದ ಕದ್ದೊಯ್ದಿದ್ದ ಕಾರನ್ನು ಮುಲ್ಕಿಯಲ್ಲಿ ಬಿಟ್ಟು ಹೋಗಿದೆ.
ನಗರದ ಉರ್ವಸ್ಟೋರ್ ಸಮೀಪದ ಕೋಟೆಕಣಿ ಒಂದನೇ ಕ್ರಾಸ್ ನಲ್ಲಿ ಮನೆಯೊಂದಕ್ಕೆ ಇಂದು ಮುಂಜಾವ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಮನೆಮಂದಿಗೆ ಹಲ್ಲೆಗೈದು ಚಿನ್ನಾಭರಣ ದೋಚಿದ ಕಳ್ಳರು, ಬಳಿಕ ಅದೇ ಮನೆಯ ಕಾರನ್ನೂ ಕದಿದ್ದಾರೆ. ಅದೇ ಕಾರಿನಲ್ಲಿ ಮುಲ್ಕಿಯ ವರೆಗೆ ಬಂದ ಕಳ್ಳರು ಇಲ್ಲಿನ ಆಧಿದನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಪರಿಚಿತ ಕಾರೊಂದು ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಪತ್ತೆಯಾಗಿರುವ ಕಾರಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
You must be logged in to post a comment Login