MANGALORE
ಮಂಗಳೂರು : ವಿದ್ಯುತ್ ತಂತಿ ಆಟೋ ಮೇಲೆ ಬಿದ್ದು ರಿಕ್ಷಾ ಚಾಲಕರ ದುರ್ಮರಣಕ್ಕೆ SDPI ಸಂತಾಪ
ಮಂಗಳೂರು : ಮಂಗಳೂರು ನಗರದ ಪಾಂಡೇಶ್ವರ ರೊಸಾರಿಯೋ ಚರ್ಚ್ ಬಳಿ ಆಟೋ ತೊಳೆಯುತ್ತಿದ್ದ ರಾಜು ಎಂಬವರ ಮೇಲೆ ವಿದ್ಯುತ್ ತಂತಿ ಬಿದ್ದು ನರಳಾಡುತ್ತಿದ್ದನ್ನು ಗಮನಿಸಿ ತಕ್ಷಣ ರಕ್ಷಣೆಗೆ ಧಾವಿಸಿದ ಇನ್ನೊಬ್ಬ ಆಟೋ ಚಾಲಕ ದೇವರಾಜುರವರ ಮರಣಕ್ಕೆ ಎಸ್.ಡಿ.ಪಿ.ಐ ದಕ್ಷಿಣ ವಿಧಾನಸಭಾ ಅಧ್ಯಕ್ಷರಾದ ಅಕ್ಬರ್ ರಾಜ್ಹಾರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಸಿಟಿ ಮಂಗಳೂರಿನ ತುಕ್ಕು ಹಿಡಿದ ಹೈ ವೋಲ್ಟೇಜ್ ತಂತಿ ಮುರಿದು ಬೀಳುವಷ್ಟು ಹೀನಾಯ ಸ್ಥಿತಿಗೆ ತಲುಪಿದರು ಅದನ್ನು ಸರಿಪಡಿಸದ ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆರಡು ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ಮನೆ ಮನೆಗೆ ಬಂದು ಸತಾಯಿಸಿ ಫೀಸ್ ತೆಗೆದು ಡಿಸ್ಕನೆಕ್ಟ್ ಮಾಡುವ ಕಾಯಕ ರೂಡಿಯಾಗಿ ಬೆಳಸಿರುವ ಈ ಮೆಸ್ಕಾಂ ಅಧಿಕಾರಿಗಳು ತುಕ್ಕು ಹಿಡಿದ ತಂತಿ,ಕಂಬ,ರೂಟ್ ಯಾವುದನ್ನು ತಪಾಸಣೆ ಮಾಡುವ ಜವಾಬ್ಧಾರಿಯನ್ನು ನಿಭಾಯಿಸದ ಕಾರಣ ಈ ದುರ್ಘಟನೆ ಉಂಟಾಗಿದೆಯೆಂದು ಆರೋಪಿಸಿದ್ದಾರೆ. ಅಮಾಯಕ ಚಾಲಕರ ದುರ್ಮರಣಕ್ಕೆ ಹೊಣೆ ಸರಕಾರ ಹಾಗೂ ಜಿಲ್ಲಾಡಳಿತ ವಹಿಸಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಗೊಳಿಸಿ ಮರಣ ಹೊಂದಿದ ಚಾಲಕರಿಗೆ ಸೂಕ್ತ ಪರಿಹಾರ ಒದಗಿಸಲು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಆಗ್ರಹಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.