ಮಂಗಳೂರು, ಸೆಪ್ಟಂಬರ್ 12: ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಧಾನ ಅಂಚೆ ಕಚೇರಿಗಳು, ಉಪ ಅಂಚೆ ಕಚೇರಿಗಳು ಸೆಪ್ಟೆಂಬರ್ 18 ರಂದು ಸ್ಥಗಿತಗೊಳ್ಳಲಿವೆ.
ಅಂಚೆ ಕಚೇರಿಗಳಲ್ಲಿ ಉನ್ನತ ತಂತ್ರಜ್ಞಾನದ ಅನುಷ್ಠಾನ ಮಾಡಲಿರುವುದರಿಂದ ಸೆಪ್ಟಂಬರ್ 18 ರಂದು ಪ್ರಧಾನ ಅಂಚೆ ಕಚೇರಿಗಳು ಹಾಗೂ ಉಪ ಅಂಚೆಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ಶಾಖಾ ಅಂಚೆ ಕಚೇರಿಗಳಲ್ಲಿ ಸೆ. 16 ಮತ್ತು 18ರಂದು ಯಾವುದೇ ವ್ಯವಹಾರ ನಡೆಯುವುದಿಲ್ಲ. ನಂತರ ಕೆಲವು ದಿನಗಳ ಕಾಲ ಹೊಸ ವ್ಯವಸ್ಥೆಗೆ ಹೊಂದಾಣಿಕೆ ಆಗುವ ತನಕ ಅಂಚೆ ಸೇವೆಗಳಲ್ಲಿ ಸ್ವಲ್ಪ ಮಟ್ಟಿನ ಅಡೆತಡೆಗಳು ಉಂಟಾಗಲಿವೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಮಂಗಳೂರಿನ ಅಂಚೆ ಅಧೀಕ್ಷಕರು ಅಂಚೆ ಕಚೇರಿಗಳಲ್ಲಿ ಉನ್ನತ ತಂತ್ರಜ್ಞಾನದ ಅನುಷ್ಠಾನ ಮಾಡಲಿರುವುದರಿಂದ ಸಾರ್ವಜನಿಕರಿಗೆ ತಾತ್ಕಾಲಿಕ ಅಡೆ ತಡೆಗಳು ಉಂಟಾಗಲಿವೆ. ನಂತರ ಕೆಲ ದಿನಗಳ ಬಳಿಕ ವ್ಯವಹಾರಗಳು ಯಥಾ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ್ದಾರೆ.
12
Sep, 2017