LATEST NEWS
ಅಡ್ಡ ಹಾಕಿದ ಪೊಲೀಸರ ನೋಡಿ ಶಾಕ್ ಆದ ಜನ…ಕೇಕ್ ಕೊಟ್ಟು ಹೊಸ ವರ್ಷದ ಶುಭಾಷಯ ತಿಳಿಸಿದ ಮಂಗಳೂರು ಪೊಲೀಸರು
ಮಂಗಳೂರು ಜನವರಿ 01: ಮಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಜೋರಾಗಿಯೇ ಇತ್ತು, ಮಂಗಳೂರಿನ ನಗರದ ವಿವಿದ ಕಡೆಗಳಲ್ಲಿ ಹೊಸ ವರ್ಷ ಸಂಭ್ರಮದ ಕಾರ್ಯಕ್ರಮಗಳು ನಡೆದವು.
ಹೊಸ ವರ್ಷದ ಹಿನ್ನಲೆ ಮಂಗಳೂರು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವೆಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ವಾಹನ ತಪಾಸಣೆ ನಡೆಸಿದ್ದಾರೆ. ಅಲ್ಲದೆ ಮಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿ ವಾಹನ ಸವಾರರಿಗೆ ಕೇಕ್ ನೀಡುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಮಂಗಳೂರಿನ ಪ್ರಮುಖ ರಸ್ತೆಗಳ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಕೇಕ್ ಕತ್ತರಿಸಿ ನೂತನ ವರ್ಷವನ್ನು ಸ್ವಾಗತಿಸಿದ್ದು, ಬಳಿಕ ವಾಹನ ಸವಾರರಿಗೆ ಕೇಕ್ ನೀಡುವ ಮೂಲಕ ಸಂಭ್ರಮಾಚರಣೆ ನಡೆಸಿದರು.