LATEST NEWS
ಮಂಗಳೂರು – ನ್ಯೂ ಇಯರ್ ಪಾರ್ಟಿಗೋಸ್ಕರ ತರಿಸಿದ್ದ 9 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ
ಮಂಗಳೂರು, ಡಿಸೆಂಬರ್ 19: ನ್ಯೂ ಇಯರ್ ಪಾರ್ಟಿಗೋಸ್ಕರ ತರಿಸಿದ್ದ 9 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಉಡುಪಿ ಜಿಲ್ಲೆಯ ದೇವರಾಜ್, ಮೊಹಮ್ಮದ್ ಫರ್ವೆಜ್ ಉಮರ್, ಶೇಖ್ ತಹೀಮ್ ಎಂದು ಗುರುತಿಸಲಾಗಿದೆ. ಕುಳೂರು ನದಿ ದಂಡೆಯಲ್ಲಿ ಡ್ರಗ್ಸ್ ಸ್ಕ್ವಾಡ್ ಹಾಗೂ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಸಿಕ್ಕಿ ಬಿದ್ದಿದ್ದಾರೆ.
ಬಂಧಿತ ಆರೋಪಿಗಳಿಂದ 5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೋಕೆನ್, 17 ಗ್ರಾಂ ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ ಮತ್ತು 3 ಎಲ್ಎಸ್ಡಿ ಸ್ಟ್ರಿಪ್ಸ್ ಸೇರಿದಂತೆ ಹರಿತವಾದ ಚಾಕು, ಮಾದಕ ವಸ್ತು ಸಾಗಾಟ ಮಾಡಲು ಉಪಯೋಗಿಸಿದ ಕಾರು ಮತ್ತು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.