LATEST NEWS
ಫರಂಗಿಪೇಟೆ – ಟೈಯರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಟೆಂಪೋ ಟ್ರಾವೆಲ್ಲರ್
ಬಂಟ್ವಾಳ, ಡಿಸೆಂಬರ್ 19: ಹೂ ಸಾಗಾಟ ಮಾಡುತ್ತಿದ್ದ ಟೆಂಪೋ ಟ್ರಾವೆಲ್ಲರ್ ಒಂದು ಪಲ್ಟಿಯಾದ ಘಟನೆ ಫರಂಗಿಪೇಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಅಲಂಕಾರಿಕ ಹೂ ತರುತ್ತಿದ್ದ ಟ್ರಾವೆಲರ್ ಫರಂಗಿಪೇಟೆ ಬರುವಷ್ಟರಲ್ಲಿ ಟಯರ್ ಬ್ಲಾಸ್ಟ್ ಆಗಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವಾಹನದಲ್ಲಿದ್ದ ಹನ್ನೊಂದು ಮಂದಿ ಕಾರ್ಮಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ವಾಹನ ರಸ್ತೆಗೆ ಮಗುಚಿ ಬಿದ್ದು ಅಲಂಕಾರಿಕ ಹೂ ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
Continue Reading