LATEST NEWS
ತನ್ನ ವಿಕೃತಿಯನ್ನು ಸಮರ್ಥಿಸಿಕೊಂಡ ಮಂಗಳೂರು ಮುಸ್ಲಿಂ ಪೇಜ್

ತನ್ನ ವಿಕೃತಿಯನ್ನು ಸಮರ್ಥಿಸಿಕೊಂಡ ಮಂಗಳೂರು ಮುಸ್ಲಿಂ ಪೇಜ್
ಮಂಗಳೂರು ನವೆಂಬರ್ 13: ಕೇಂದ್ರ ಸಚಿವ ಹಿರಿಯ ಬಿಜೆಪಿ ನಾಯಕ ಅನಂತ್ ಕುಮಾರ್ ಅವರ ನಿಧನವನ್ನು ಸಂಭ್ರಮಿಸಿ ಪೋಸ್ಟ್ ಹಾಕಿದ್ದ ಮಂಗಳೂರು ಮುಸ್ಲಿಂ ಪೇಜ್ ಈಗ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಈ ಕುರಿತಂತೆ ಮತ್ತೊಂದು ಪೋಸ್ಟ್ ನ್ನು ಮಾಡಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ನಂತರ ತನ್ನ ಸಂತೋಷವನ್ನು ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಮ್ ಫೇಸ್‌ಬುಕ್ ಪೇಜ್ ವಿರುದ್ದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಮಂಗಳೂರು ಪೊಲೀಸರು ಮಂಗಳೂರು ಮುಸ್ಲಿಂ ಪೇಜ್ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.

ಈ ಬೆನ್ನಲ್ಲೇ ಮತ್ತೆ ಈ ಪೇಜಿನ ಅಡ್ಮಿನ್ ಮತ್ತೊಂದು ಅನಂತ್ ವಿರೋಧಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ.
‘ಅನಂತ್ ಕುಮಾರ್ ಸಾವಿನ ಹಿಂದೆ ದುಃಖ ಪಡುವ ಅವಶ್ಯಕತೆ ಇಲ್ಲ ಸತ್ತಿದ್ದರಿಂದ ದೇಶಕ್ಕೆ ಒಳ್ಳೆಯದಾಗಲಿದೆ. ಏನು ಗೊತ್ತಿಲ್ಲದ ಅಮಾಯಕರಿಗೆ ಕೋಮು ವಿಷ ಬೀಜ ಬಿತ್ತಿ ಆಳುವ ಇಂಥವರೆಲ್ಲ ಆದಷ್ಟು ಬೇಗ ನಿರ್ನಾಮ ಆಗಲಿ.
ಏನು ಗೊತ್ತಿಲ್ಲದ ಅಮಾಯಕರಿಗೆ ಧರ್ಮದ ಅಮಲು ಬಿತ್ತಿ ಮುಸ್ಲಿಮರನ್ನು ರಾಜಕೀಯ ಕಾರಣಕ್ಕೆ ರಾಮನನ್ನು ಎದುರು ಹಾಕಿ ಕೊಲ್ಲಲು ಹೊರಟಿದ್ದ ನಾಯಿಗಳಾದ ಆಡ್ವಾಣಿ ಸೇರಿ ಆತನ ಚಮಚ ಇಂದು ಸತ್ತ ಅನಂತ್ ಕುಮಾರ್ ಸಾವಿನಲ್ಲಿ ಸಂಭ್ರಮಿಸಬಾರದು ನಿಜ. ಆದರೆ ಬಾಬರೀ ಮಸೀದಿ ಧ್ವಂಸಕ್ಕೆ ಕಾರಣವಾದ ಹಾಗೂ ಸಾವಿರಾರು ಅಮಾಯಕ ಮನುಷ್ಯರ ಹತ್ಯೆಗೆ ಮುಹೂರ್ತ ಕಲ್ಪಿಸಿದ ರಥಯಾತ್ರೆಯ ಸೂತ್ರದಾರರಲ್ಲಿ ಒಬ್ಬನಾದ ಅನಂತಕುಮಾರ್ ನನ್ನ ಮುಸ್ಲಿಮರು ಸೇರಿ ಮನುಷತ್ವ ಇರುವ ಜನರು ಕ್ಷಮಿಸಲು ಹೇಗೆ ಸಾಧ್ಯ?
ಇಂದಿಗೂ ಆಡ್ವಾಣಿಯ ನೀಲಿ ಕಣ್ಣಿನ ಹುಡುಗ ಎನ್ನುವ ಈ ಭಯೋತ್ಪಾದಕ ಅನಂತ್ ಕುಮಾರ್ ರಥಯಾತ್ರೆಗೆ ಆಡ್ವಾಣಿ ಜೊತೆ ಸೇರಿ ಸಾವಿರಾರು ಮುಸ್ಲಿಮರ ಮಾರಣ ಹೋಮಕ್ಕೆ ಕಾರಣನಾದ ಕುತಂತ್ರಿ ಬ್ರಾಹ್ಮಣ. ಅಲ್ಲಾ ವಿರೋಧಿ ಆದ ಇವನ ಸಾವು ನಾವು ಬದುಕಿದ್ದಾಗಲೇ ಕಣ್ಣಾರೆ ನೋಡಿದ್ದು ಬಹಳ ಸಂತೋಷವಾಗಿದೆ. ಈತ ಮುಸ್ಲಿಂ ವಿರೋಧಿ ಆಗಿದ್ದರೆ ಈತನ ಸಾವಿಗೆ ಸಂತಾಪ ಪಡಬಹುದಿತ್ತು. ಈತ ವಿರೋದಿಸಿದ್ದು ಸರ್ವ ಲೋಕದ ಒಡೆಯನಾದ ಅಲ್ಲಾ ಹಾಗೂ ಆತನನ್ನು ಆರಾಧಿಸಲು ಆಯ್ಕೆಯಾದ ಸ್ಥಳಗಳನ್ನು. ಅಲ್ಲಾಹನ ವಿರೋಧಿ ಶೈತಾನ್ ಇಬ್ಲಿಸ್. ಇಂಥ ಕ್ರಿಮಿಗಳ ಸಾವು ಬಾಹ್ಯ ಜಗತ್ತಿಗೆ ಮುಸ್ಲಿಮರು ತೋರಿಸದಿದ್ದರೂ ಮನಸ್ಸು ಒಳಗಿಂದ ಒಳಗೆ ಶುಕರ್ ಅಲ್ಲಾಹ ಅಂದಿರುವುದು ಸುಳ್ಳಾಗಲು ಸಾಧ್ಯವಿಲ್ಲ.
ಗೌರಿ ಲಂಕೇಶ್, ಅನಂತಮೂತಿ೯, ಸಿದ್ಧರಾಮಯ್ಯನವರ ಪುತ್ರ ಸೇರಿದಂತೆ ಹಲವು ಬಿಜೆಪಿಯೇತರರು ಸತ್ತಾಗ ಇಲ್ಲಿ ಹಲವು ಫೇಸ್ ಬುಕ್ ಪೇಜುಗಳು ಅಕೌಂಟುಗಳು ನಿನ್ನೆ ತಾನೇ ಜೈಲು ಪಾಲಾದ ರೆಡ್ಡಿಯಂಥ ರಾಜಕಾರಣಿಗಳು ಸಂಭ್ರಮಿಸಿದ್ದರು. ಇಲ್ಲಿನ ಮುಖ್ಯಧಾರೆಯ ಯಾವ ಮಾಧ್ಯಮಗಳೂ ಅವನ್ನು ಸುದ್ದಿ ಮಾಡಿರಲಿಲ್ಲ. ನಮಗೆ ಮುಸ್ಲಿಮರ ಸಾವಿಗೆ ಕಾರಣರಾಗಿ ದೇಶಕ್ಕೆ ಜಾತಿಯ ವಿಷ ಬೀಜ ಬಿತ್ತಿದ ಇಂತ ಜಾತಿ ವಿಷಕಾರಿ ಜಂತುಗಳ ಸಾವಿಗೆ ದುಃಖಪಡುವ ಯಾವ ಅಗತ್ಯವೂ ಇಲ್ಲ. ಇಂಥವರ ಮನಸ್ಥಿತಿಯಲ್ಲಿ ಸಾಮರಸ್ಯದ ಚಿಂತನೆಯೇ ಇಲ್ಲ. ಇವರಲ್ಲಿ ಇರುವುದು ಕೋಮುಗಳಿಗೆ ಬೆಂಕಿ ಹಾಕಿ ದೇಶ ಸುಡುವ ಮನಸ್ಥಿತಿ ಎನ್ನುದನ್ನು ಮನಗಾಣಬೇಕು. ಇಂಥವರ ಸಾವು ಕಾನ್ಸರ್ ಗಿಂತ ಭಯಾನಕವಾದ ಜ್ಞಾಪಕ ಶಕ್ತಿ ಕಳೆದು ಕೊಂಡು ವಾಜಪೇಯಿ ಹುಚ್ಚನಾಗಿ ನರಳಿ ನರಳಿ ಸತ್ತಂತೆ ಬರಲಿ ಎಂದು ಅಲ್ಲಾಹನಲ್ಲಿ ದುವಾ ಮಾಡುತ್ತೇವೆ.
– ಅಡ್ಮಿನ್ ಬಳಗ ಮಂಗಳೂರು ಮುಸ್ಲಿಮ್ಸ್’
ಎಂಬ ರೀತಿಯಲ್ಲಿ ಹೇಳಿಕೆಗಳನ್ನು ಈ ಪೇಜ್ ನಲ್ಲಿ ಹಾಕಲಾಗಿದೆ. ಅಲ್ಲದೆ ಈ ಪೇಜ್ ವಿರುದ್ದ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೂ ಈ ತನ್ನ ಹೇಳಿಕೆಯನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ.