Connect with us

    LATEST NEWS

    ಮಂಗಳೂರು ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ.. ಸುಮಂಗಲಾ ರಾವ್ ಉಪ ಮೇಯರ್

    ಮಂಗಳೂರು ಮಾರ್ಚ್ 2: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಯ್ಕೆ ಇಂದು ನಡೆದಿದ್ದು, ಪಾಲಿಕೆಯಲ್ಲಿ ಬಹುಮತ ಇರುವ ಬಿಜೆಪಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿ ಹಾಗೂ ಬಿಜೆಪಿ ಸದಸ್ಯೆ ಸುಮಂಗಲಾ ರಾವ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಪ್ರೇಮಾನಂದ ಶೆಟ್ಟಿ ಹಾಗೂ ಸುಮಂಗಲಾ ರಾವ್ ಅವರಿಗೆ ಇಬ್ಬರು ಶಾಸಕರ ಮತ ಸೇರಿ ತಲಾ 46 ಮತಗಳು ಬಿದ್ದಿವೆ. ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ 14 ಮತಗಳು ಮಾತ್ರ ಲಭಿಸಿವೆ. ಚುನಾವಣೆಯಲ್ಲಿ ಎಸ್‌ಡಿಪಿಐನ ಇಬ್ಬರು ಸದಸ್ಯರು ತಟಸ್ಥರಾಗಿದ್ದರು. ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪ ಮೇಯರ್‌ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು.

     

    ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಕುಂಜತ್‌ಬೈಲ್ ಸೌತ್ ವಾರ್ಡ್‌ನ ಬಿಜೆಪಿ ಸದಸ್ಯೆ ಸುಮಂಗಲಾ ರಾವ್ ಅವರನ್ನು ಬಿಜೆಪಿ ಮುಖಂಡರು ಅಯ್ಕೆ ಮಾಡಿದ್ದರು.ಯ

    Share Information
    Advertisement
    Click to comment

    You must be logged in to post a comment Login

    Leave a Reply