Connect with us

    LATEST NEWS

    ಮಂಗಳೂರು ಲಿಟ್ ಫೆಸ್ಟ್ ಆರನೇ ಆವೃತ್ತಿ -2024 – ಪಲ್ಲಕಿ ಉತ್ಸವದೊಂದಿಗೆ ವಿಜೃಂಭಣೆಯ ಶುಭಾರಂಭ

    ಮಂಗಳೂರು: ಜನವರಿ 19, 20 ಮತ್ತು 21 ರಂದು ಮೂರು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಮಂಗಳೂರು ಲಿಟ್ ಫೆಸ್ಟ್ನ ಆರನೇ ಆವೃತ್ತಿಯು ಜನವರಿ 19ರಂದು ಸಂಜೆ 60ಗಂಟೆಗೆ ಅದ್ಧೂರಿಯಾಗಿ ಶುಭಾರಂಭಗೊಂಡಿತು.


    ದೀಪ ಪ್ರಜ್ವನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ 6ನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ನ ಉದ್ಘಾಟಿಸಿ ಮಾತನಾಡಿ ಸಾಹಿತ್ಯವೆಂದರೆ ಸ್ವಾಧ್ಯಾಯ, ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪದ ಸೃಜನಶೀಲತೆ, ಸೃಜನಶೀಲತೆಯ ಹುಟ್ಟು ಇರುವುದು, ಆದರ್ಶ ಮತ್ತು ನೋವನ್ನು ಆಲಿಸುವ ಸಂವೇದನಾಶೀಲತೆಯ ಸಮ್ಮಿಲನದಲ್ಲಿ, ನಮ್ಮನ್ನು ಆಳುತ್ತಿರುವುದು ಯಾವುದೇ ಸರ್ಕಾರವಲ್ಲ, ಬದಲಾಗಿ ಭಾಷೆ. ಇದೇ ಶಾಂತಿಯನ್ನೂ ಕಟ್ಟುತ್ತದೆ ಎಂದರು.


    ಮಂಗಳೂರಿನ ಡಾ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಿದ ಉದ್ಘಾಟನಾ ಕಾರ್ಯಕ್ರಮ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಮಿಥಿಕ್ ಸೊಸೈಟಿ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಎಸ್ ರವಿ ಮಾತನಾಡಿ ಭಾರತದ ಪರಂಪರೆಯ ಗೌರವವನ್ನು ಎತ್ತಿ ಹಿಡಿಯುತ್ತಾ, ಈ ಲಿಟ್ ಫೆಸ್ಟ್ ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತ ವಿಶೇಷ ಅರಿವು ಮತ್ತು ವಿವಿಧ ವಿಚಾರಗೋಷ್ಠಿಗಳಿಗೆ ಸಾಕ್ಷಿಯಾಗಲಿದೆ ಎಂದರು.

    ತಮ್ಮ ಸಮಾಜ ಸೇವೆಗಾಗಿ ತಮ್ಮ ಸಂಸ್ಥೆಯ ಪರವಾಗಿ ಸನ್ಮಾನವನ್ನು ಸ್ವೀಕರಿಸಿದ ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಯ ಕಾರ್ಯದರ್ಶಿ ಮಧುರಾ ಹೆಗ್ಡೆ, ಭಾರತ್ ಫೌಂಡೇಶನ್‌ನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುನಿಲ್ ಕುಲಕರ್ಣಿ, ಶ್ರಿರಾಜ್ ಗುಡಿ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ ಉಪಸ್ಥಿತಿರಿದ್ದರು. ಭಾರತ್ ಫೌಂಡೇಶನ್ ನ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು. ಅಭಿಷೇಕ್ ಶೆಟ್ಟಿ ಮತ್ತು ನಿಧಿ ಹೆಗ್ಡೆ ನಿರೂಪಿಸಿದರು. ಈ ಸಂದರ್ಭ ದಿ ಐಡಿಯಾ ಆಫ್ ಭಾರತ ಎಂಬ ಲೇಖನ ಸಂಕಲನವೊAದರ ಬಿಡುಗಡೆ ಸಮಾರಂಭವೂ ಜರುಗಿತು. ಸಭಾ ಕಾರ್ಯಕ್ರಮದ ಬಳಿಕ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರಾಧೆ ಜಗ್ಗಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

    Share Information
    Advertisement
    Click to comment

    You must be logged in to post a comment Login

    Leave a Reply