LATEST NEWS
ದೈವಸ್ಥಾನಗಳ ಕಾಣಿಕೆ ಡಬ್ಬಿಗೆ ಖೋಟಾನೋಟಿನಲ್ಲಿ ಅವಹೇಳನಕಾರಿ ಬರಹ ಬರೆದು ಹಾಕಿದ ದುಷ್ಕರ್ಮಿಗಳು

ಮಂಗಳೂರು ಜನವರಿ 2: ಮಂಗಳೂರು ನಗರದ ಮೂರು ದೈವಸ್ಥಾನಗಳ ಕಾಣಿಕೆ ಡಬ್ಬಿಗಳಲ್ಲಿ ಹಿಂದೂ ದೇವರ ಕುರಿತಂತೆ ಅವಹೇಳನಕಾರಿಯಾಗಿ ಬರೆದು ಹಾಕಿರುವ ಘಟನೆ ನಡೆದಿದೆ.
ಮಂಗಳೂರು ನಗರದ ಬಾಬುಗಡ್ಡೆಯಲ್ಲಿರುವ ಭಗವಾನ್ ಶ್ರೀ ಬಬ್ಬುಸ್ವಾಮಿ ಕ್ಷೇತ್ರದ ಇದರ ಕಾಣಿಕೆ ಡಬ್ಬಿಗೆ ಯಾರೋ ಕಿಡಿಗೇಡಿಗಳು 200 ರೂ ಖೋಟಾನೋಟಿನಲ್ಲಿ ಅಸಭ್ಯವಾಗಿ ಬರೆದು ಮತ್ತು ಬಳಸಿದ ಕಾಂಡೋಮ್ ನ್ನು ಹಾಕಿದ್ದಾರೆ.

ಅಲ್ಲದೆ ನಗರದ ಪ್ರಮುಖ ಮೂರು ದೈವಸ್ಥಾನಗಳಲ್ಲಿ ದುಷ್ಕರ್ಮಿಗಳು ಈ ಕುಕೃತ್ಯ ನಡೆಸಿದ್ದಾರೆ. ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನದಲ್ಲೂ ಈ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಯಾರೇ ಈ ಕೃತ್ಯ ಮಾಡಿರುವ ಅಂತವರಿಗೆ ದೈವಸ್ಥಾನದ ಕಾರ್ನಿಕ ದೈವಗಳು ತಕ್ಕ. ಶಿಕ್ಷೆ ನೀಡುತ್ತಾರೆ ಎಂದು ಬಲವಾದ ನಂಬಿಕೆಯಲ್ಲಿ ಇಂದು ಗ್ರಾಮಸ್ಥರು , ಊರ ಭಕ್ತಾದಿಗಳು ಸೇರಿ ಪ್ರಾರ್ಥನೆ ಮಾಡಿದ್ದಾರೆ.