Connect with us

    LATEST NEWS

    ಇನ್ಸುಲೇಟರ್ ವಾಹನಕ್ಕೆ ಬೈಕ್ ಡಿಕ್ಕಿ ವಾಹನ ಸವಾರ ಸಾವು

    ಉಡುಪಿ ಜನವರಿ 2: ಇನ್ಸುಲೇಟರ್ ವಾಹನ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವಡಬಾಂಡೇಶ್ವರ ತೊಟ್ಟಂ ರಸ್ತೆಯ ತಿರುವಿನಲ್ಲಿ ಸಂಭವಿಸಿದೆ.


    ಮೃತ ವ್ಯಕ್ತಿಯನ್ನು ದ್ವಿಚಕ್ರ ವಾಹನ ಸವಾರ ಹೂಡೆ ನಿವಾಸಿ ಇಸಾಕ್ ಎಂದು ಗುರುತಿಸಲಾಗಿದೆ. ವಡಬಾಂಡೇಶ್ವರ ತೊಟ್ಟಂ ರಸ್ತೆಯ ತಿರುವಿನಲ್ಲಿ ಇನ್ಸುಲೇಟರ್ ವಾಹನ ಎದುರಿನಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಾಹನ ಸವಾರ ಮೃತಪಟ್ಟಿದ್ದಾರೆ. ಇನ್ಸುಲೇಟರ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಇನ್ನೊಂದು ವಾಹನಕ್ಕೆ ಕೂಡ ಡಿಕ್ಕಿ ಹೊಡೆದಿದೆ . ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply