LATEST NEWS
ಹೊಸ ಅಧೀಕ್ಷಕರ ಎಫೆಕ್ಟ್ – ಮಂಗಳೂರು ಜೈಲಿಗೆ ಪೊಲೀಸರ ದಾಳಿ
ಹೊಸ ಅಧೀಕ್ಷಕರ ಎಫೆಕ್ಟ್ – ಮಂಗಳೂರು ಜೈಲಿಗೆ ಪೊಲೀಸರ ದಾಳಿ
ಮಂಗಳೂರು ಸೆಪ್ಟೆಂಬರ್ 19: ಮಂಗಳೂರು ಜೈಲಿಗೆ ಬೆಳ್ಳಂಬೆಳಿಗ್ಗೆ ಪೊಲೀಸ್ ದಾಳಿ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಜೈಲಿನೊಳಗೆ ಶೋಧಕಾರ್ಯ ಆರಂಭಿಸಿದ್ದಾರೆ. ಜೈಲಿನಲ್ಲಿ ಮಾರಕಾಸ್ತ್ರಗಳು ನುಸುಳಿರುವ ಮಾಹಿತಿ ಹಿನ್ನೆಲೆ ಯಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ. ಕಳೆದ ಹಲವಾರು ತಿಂಗಳು ಗಳಿಂದ ಅಕ್ರಮಗಳಿಗೆ ಕುಖ್ಯಾತಿ ಪಡೆದಿರುವ ಮಂಗಳೂರು ಜೈಲು. ನಿನ್ನೆ ತಾನೇ ನೂತನ ಅಧೀಕ್ಷಕರಾಗಿ ಪರಮೇಶ್ ನೇಮಕಗೊಂಡಿದ್ದರು. ಪರಪ್ಪನ ಅಗ್ರಹಾರದಿಂದ ಮಂಗಳೂರು ಜೈಲಿಗೆ ಅಧೀಕ್ಷಕರಾಗಿ ವರ್ಗಾವಣೆಯಾಗಿದ್ರು. ಅಧಿಕಾರದ ಮೊದಲನ ದಿನದಲ್ಲಿಯೇ ಖೈದಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
VIDEO
You must be logged in to post a comment Login