Connect with us

LATEST NEWS

ಪ್ಲ್ಯಾಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 3 ಮಹಿಳೆಯರು ಸೇರಿದಂತೆ ಒರ್ವನ ಬಂಧನ

ಪ್ಲ್ಯಾಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 3 ಮಹಿಳೆಯರು ಸೇರಿದಂತೆ ಒರ್ವನ ಬಂಧನ

ಮಂಗಳೂರು ಸೆಪ್ಟೆಂಬರ್ 18: ಫ್ಲ್ಯಾಟ್ ಒಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ ನಗರ ಹೊರವಲಯದ ಯೆಯ್ಯಾಡಿಯ ಫ್ಲ್ಯಾಟ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಕಾರ್ಯಾಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು.
ಈ ಹಿನ್ನೆಲೆಯಲ್ಲಿ ಕದ್ರಿ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯ್ಕ್ ನೇತೃತ್ವದಲ್ಲಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ಮೂರು ಮಹಿಳೆಯರು ಸೇರಿದಂತೆ ಮರೋಳಿಯ ಸೀತಾರಾಮ್ ಎಂಬುವರನ್ನು ಬಂಧಿಸಿದೆ.
ದಾಳಿಯ ವೇಳೆ ಇನ್ನೋರ್ವ ಆರೋಪಿ ಹರೀಶ್ ಎಂಬವನು ಪರಾರಿಯಾಗಿದ್ದಾನೆ. ಪರಾರಿಯಾದ ಹರೀಶ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ರಹಸ್ಯವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Facebook Comments

comments