Connect with us

    DAKSHINA KANNADA

    ಮಾ.10ರಿಂದ ಮಂಗಳೂರು–ಹುಬ್ಬಳ್ಳಿ ನೇರ ವಿಮಾನ ರದ್ದು

    ಮಂಗಳೂರು, ಮಾರ್ಚ್ 03: ಮಂಗಳೂರು–ಹುಬ್ಬಳ್ಳಿ ಮಧ್ಯೆ ಇದ್ದ ನೇರ ವಿಮಾನ ಸೇವೆ ಇದೇ 10ರಿಂದ ಸ್ಥಗಿತಗೊಳ್ಳಲಿದೆ.

    ಕಳೆದ ವರ್ಷದ ಮೇ ತಿಂಗಳಲ್ಲಿ ಇಂಡಿಗೋ ಸಂಸ್ಥೆ ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಿತ್ತು. ಸೋಮವಾರ, ಬುಧವಾರ, ಶುಕ್ರವಾರ ಈ ಮಾರ್ಗದಲ್ಲಿ ನೇರ ವಿಮಾನ ಸೇವೆ ಇತ್ತು. ಸಂಜೆ 6.30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ ರಾತ್ರಿ 7.35ಕ್ಕೆ ಮಂಗಳೂರು ತಲುಪುತ್ತಿತ್ತು. ಮಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ರಾತ್ರಿ 9.05 ಹುಬ್ಬಳ್ಳಿ ತಲುಪುತ್ತಿತ್ತು.

    ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಈ ಸೇವೆಯನ್ನು ಇದೇ 10ರಿಂದ ಕೊನೆಗೊಳಿಸಲಾಗುತ್ತಿದೆ.  ಹುಬ್ಬಳ್ಳಿಯಿಂದ ಪುಣೆ ಮಾರ್ಗದಲ್ಲಿ ಈ ವಿಮಾನ ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply