Connect with us

    LATEST NEWS

    ಮಾರ್ಚ್ 10 ರಿಂದ ಮಂಗಳೂರು ಹುಬ್ಬಳ್ಳಿ ನೇರ ವಿಮಾನ ರದ್ದು…!!

    ಮಂಗಳೂರು ಮಾರ್ಚ್ 04: ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಹಿನ್ನಲೆ ಮಂಗಳೂರು ಹುಬ್ಬಳ್ಳಿ ನೇರ ವಿಮಾನ ಯಾನವನ್ನು ಮಾರ್ಚ್ 10 ರಿಂದ ರದ್ದು ಪಡಿಸಲು ಇಂಡಿಗೋ ನಿರ್ಧರಿಸಿದೆ.


    ಕಳೆದ ವರ್ಷದ ಮೇ ತಿಂಗಳಲ್ಲಿ ಇಂಡಿಗೋ ಸಂಸ್ಥೆ ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಿತ್ತು. ಸೋಮವಾರ, ಬುಧವಾರ, ಶುಕ್ರವಾರ ಈ ಮಾರ್ಗದಲ್ಲಿ ನೇರ ವಿಮಾನ ಸೇವೆ ಇತ್ತು. ಸಂಜೆ 6.30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ ರಾತ್ರಿ 7.35ಕ್ಕೆ ಮಂಗಳೂರು ತಲುಪುತ್ತಿತ್ತು. ಮಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ರಾತ್ರಿ 9.05 ಹುಬ್ಬಳ್ಳಿ ತಲುಪುತ್ತಿತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಈ ಸೇವೆಯನ್ನು ಇದೇ 10ರಿಂದ ಕೊನೆಗೊಳಿಸಲಾಗುತ್ತಿದೆ. ಹುಬ್ಬಳ್ಳಿಯಿಂದ ಪುಣೆ ಮಾರ್ಗದಲ್ಲಿ ಈ ವಿಮಾನ ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply