LATEST NEWS
ತಿರ್ಥಹಳ್ಳಿ ಗಾಂಜಾ ಮಂಗಳೂರಿನಲ್ಲಿ ಸೇಲ್

ತಿರ್ಥಹಳ್ಳಿ ಗಾಂಜಾ ಮಂಗಳೂರಿನಲ್ಲಿ ಸೇಲ್
ಮಂಗಳೂರು ಅಕ್ಚೋಬರ್ 30: ಮಂಗಳೂರು ನಗರ ಬಿಜೈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತಿದ್ದ 5 ಮಂದಿಯನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳು ಸುಮಾರು ಎರಡು ವರ್ಷದಿಂದ ತೀರ್ಥಹಳ್ಳಿಯಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಅದನ್ನು ಸಾರ್ವಜನಿಕರಿಗೆ ಮತ್ತು ನಗರ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ನಗರದ ಬಿಜೈ ರಾಮ ಮಂದಿರದ ಬಳಿಯಲ್ಲಿರುವ ತಿರುಮೇಲೇಶ್ ಎಂಬ ಮನೆಯಲ್ಲಿ ರೋಶನ್ ಎಂಬವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮನೆಗೆ ದಾಳಿ ಮಾಡಿದ್ದಾರೆ. ಬಂಧಿತರನ್ನು ರೋಶನ್ ವೇಗಸ್, ಅನಿಲ್ ಡಿ ಸೋಜ, ಮೆಲ್ವಿನ್ ರೋಹಿತ್, ರಕ್ಷಿತ್ ಶೆಟ್ಟಿ, ಯಜ್ಞೇಶ ಶೆಟ್ಟಿ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ 61 ಗಾಂಜಾ ಪ್ಯಾಕೇಟುಗಳು ಸೇರಿ ಒಟ್ಟು 2.2 ಕಿಲೋ ಗ್ರಾಂ ಗಾಂಜಾ 5 ಮೊಬೈಲ್ ಫೋನ್ ಮತ್ತು ನಗದು ರೂ.2390/- ಪತ್ತೆಯಾಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು ರೂ.78,390/- ವಾಗಿರುತ್ತದೆ.