LATEST NEWS
ಮಂಗಳೂರು ಮಿನುಗಾರಿಕಾ ಧಕ್ಕೆಯಲ್ಲಿ ಬ್ಯಾನರ್ ವಿವಾದ – ಹಿಂದೂ ಮೀನು ವ್ಯಾಪಾರಸ್ಥರ ಮೇಲೆ ನಡೆಯುವ ದೌರ್ಜನ್ಯ- ವಿಶ್ವ ಹಿಂದೂ ಪರಿಷದ್
ಮಂಗಳೂರು ಸೆಪ್ಟೆಂಬರ್ 25: ಈದ್ ಮಿಲಾದ್ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ 1 ತಿಂಗಳ ಕಾಲ ಕಾನೂನು ಕ್ರಮಕೈಗೊಳ್ಳಲಾಗುವುದು ಎಂಬ ಬ್ಯಾನರ್ ಇದೀಗ ವಿವಾದಕ್ಕೆ ಕಾರಣವಾಗಿದ್ದು. ಭಾರೀ ವಿರೋಧ ವ್ಯಕ್ತವಾಗಿದೆ.
ಸೆಪ್ಟೆಂಬರ್ 28ರ ಈದ್ ಮಿಲಾದ್ ಹಬ್ಬದ ನೆಪದಲ್ಲಿ ನಗರದ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್ ಹಾಕಿದ್ದು, ಅಂದು ಮುಂಜಾನೆ 3.45ರಿಂದ ಯಾವುದೇ ಮೀನು ವ್ಯಾಪಾರಿಗಳು ಕೆಲಸ ಮಾಡದೇ ಕಡ್ಡಾಯ ರಜೆ ಹಾಕಬೇಕು. ತಪ್ಪಿದಲ್ಲಿ ಅಂಥವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ ಕಾಲ ನಿಷೇಧ ಹೇರಲಾಗುವುದು ಎಂದು ಬ್ಯಾನರಿನಲ್ಲಿ ಎಚ್ಚರಿಸಲಾಗಿದೆ.
ಈ ಬ್ಯಾನರ್ ಇದೀಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಾರ ನಿರ್ಬಂಧ ಹಾಗೆ ದಂಡ ವಿಧಿಸುವಂತಹ ಬ್ಯಾನರ್ ನ್ನು ಧಕ್ಕೆಯ ಹಸಿ ಮೀನು ವ್ಯಾಪಾರಸ್ಥರು ಹಾಕಿದ್ದು ಖಂಡನೀಯ. ಪ್ರಜಾಪ್ರಭುತ್ವ ದೇಶದಲ್ಲಿ ಇದು ಸಂವಿಂಧಾನ ವಿರೋಧಿಯಾಗಿದೆ. ಹಿಂದೂ ಮೀನು ವ್ಯಾಪಾರಸ್ಥರ ಮೇಲೆ ನಡೆಯುವ ಈ ದೌರ್ಜನ್ಯಕ್ಕೆ ವಿಶ್ವ ಹಿಂದೂ ಪರಿಷದ್ ಖಂಡನೆ ಮಾಡುತ್ತದೆ. ಅಲ್ಲದೆ ಜಿಲ್ಲಾಡಳಿತ ತಕ್ಷಣ ಹಸಿ ಮೀನು ವ್ಯಾಪಾರಸ್ಥ ಸಂಘದ ಅಧ್ಯಕ್ಷರ ಮೇಲೆ ಹಾಗು ಈ ಬ್ಯಾನರ್ ಅಳವಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಆಗ್ರಹಿಸಿದರು.
ಧಕ್ಕೆಯಲ್ಲಿ ಈ ರೀತಿ ದಂಡನೆ ವಿಧಿಸಲು ಇಲ್ಲಿ ಷರೀಯತ್ ಕಾನೂನು ಜಾರಿಯಲ್ಲಿದೆಯಾ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ಪ್ರಶ್ನೆ ಮಾಡಿದ್ದು, ಇವರ ಗೊಡ್ಡು ಬೆದರಿಕೆಗಳಿಗೆ ಹಿಂದು ವ್ಯಾಪಾರಿಗಳು ಮಣಿಯಬಾರದು. ನಿಮ್ಮ ಜೊತೆಗೆ ಹಿಂದು ಸಮಾಜ ಇದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರನ್ನು ತೆರವು ಮಾಡಬೇಕೆಂದು ಆಗ್ರಹಿಸಿದ್ದಾರೆ.