LATEST NEWS
ಮಂಗಳೂರು ಡ್ರಗ್ಸ್ ಪ್ರಕರಣ ಸ್ಯಾಮ್ ಬಚ್ಚಿಟ್ಟ ಸ್ಪೋಟಕ ಮಾಹಿತಿ – ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಆತಂಕ

ಮಂಗಳೂರು ಅಕ್ಟೋಬರ್ 2:ಮಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್ ಪ್ರಕರಣ ತನಿಖೆ ದಿನದಿಂದ ದಿನಕ್ಕೆ ಸ್ಪೋಟಕ ತಿರುವುಗಳನ್ನು ಪಡೆಯುತ್ತಿದೆ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ ಬಂಧನವಾಗುತ್ತಲೇ ಹಲವು ಡ್ರಗ್ ಪೆಡ್ಲರ್ ಗಳನ್ನು ಪೊಲೀಸರು ಬೆಂಗಳೂರು ಹಾಗೂ ಮುಂಬೈನಿಂದ ಬಂಧಿಸಿದ್ದಾರೆ. ಈ ನಡುವೆ ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಕೊರಿಯೋಗ್ರಾಫರ್ ಸ್ಯಾಮ್ ಫೆರ್ನಾಂಡಿ ಸ್ ನ್ನು ನಿನ್ನೆ ಬಂಧಿಸಿದ್ದರು. ಬಂಧಿತ ಸ್ಯಾಮ್ ಅನುಶ್ರೀ ಜೊತೆ ಹಳೆ ಬಿಗ್ ಬಾಸ್ ಸ್ಪರ್ಧಿಗಳಿಗೂ ನಶೆ ನಂಟು ಇದೆ ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ ಎಂದು ಹೇಳಲಾಗಿದೆ.
ನಿರೂಪಕಿ ಅನುಶ್ರೀ ಜೊತೆ ರಿಯಾಲಿಟಿ ಶೋ ಸ್ಟಾರ್ ಡ್ರಗ್ಸ್ ನಂಟಿದೆ ಎಂದು ಹೇಳಲಾಗಿದೆ. ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ನಟಿ ಅನುಶ್ರೀ ಜೊತೆ ಪಾರ್ಟಿಗೆ ಕಾಣಿಸಿಕೊಂಡಿದ್ದು, ಕರಾವಳಿ ಮೂಲದ ನಟಿ ಕಮ್ ರಿಯಾಲಿಟಿ ಶೋ ಸ್ಟಾರ್ ಆಗಿರುವ ಇವರಿಗೆ ನಶೆ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.

ಅನುಶ್ರೀ ಜೊತೆ ಡ್ರಗ್ಸ್ ಪಾರ್ಟಿಗಳಲ್ಲಿ ನಟಿ ಭಾಗವಹಿಸುತ್ತಿದ್ರು ಎಂಬ ಮಾಹಿತಿ ಸಿಕ್ಕಿದೆ. ಹಲವು ಫೇಮಸ್ ಸೀರಿಯಲ್ಗಳಲ್ಲಿ ನಟಿಸಿರುವ ಈ ಕಿರುತೆರೆ ನಟಿಯ ಬಗ್ಗೆ ಬಂಧಿತ ಕೊರಿಯೋಗ್ರಾಫರ್ ಸ್ಯಾಮ್ ಫರ್ನಾಂಡೀಸ್ ಸ್ಫೋಟಕ ಮಾಹಿತಿಯನ್ನು ಸಿಸಿಬಿ ಬಳಿ ಬಾಯ್ಬಿಟ್ಟಿದ್ದಾನೆ. ಅಲ್ಲದೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ನಟನಿಗೂ ಡ್ರಗ್ ಪ್ರಕರಣದಲ್ಲಿ ನಂಟಿದೆ ಎಂದು ಹೇಳಲಾಗಿದೆ. ಇವರು ಡ್ರಗ್ ಪಾರ್ಟಿ ಮಾಡಿರುವ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ.