Connect with us

    LATEST NEWS

    ಬಹರೇನ್ – ಇಸ್ರೇಲ್ ಪರ ಪೋಸ್ಟ್ ಹಾಕಿ ಕೆಲಸ ಕಳೆದುಕೊಂಡು ಜೈಲು ಪಾಲಾದ ಭಾರತೀಯ ಮೂಲದ ವೈದ್ಯ

    ಮಂಗಳೂರು ಅಕ್ಟೋಬರ್ 21: ಬಹರೇನ್ ನಲ್ಲಿರುವ ವೈದ್ಯರೋಬ್ಬರು ಇಸ್ರೇಲ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಇದೀಗ ಕೆಲಸ ಕಳೆದುಕೊಂಡಿದ್ದಲ್ಲದೇ ಅರೆಸ್ಟ್ ಆದ ಘಟನೆ ಬಹರೇನ್ ನಲ್ಲಿ ನಡೆದಿದೆ. ಹಮಾಸ್ ಉಗ್ರರನ್ನು ವಿರೋಧಿಸಿ, ಇಸ್ರೇಲ್ ದೇಶದ ಪರವಾಗಿ ಡಾ.ಸುನಿಲ್ ರಾವ್ ಹಾಕಿದ್ದ ಪೋಸ್ಟ್ ಎಕ್ಸ್ ಟ್ವಿಟರ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟ್‌ ನ್ನು ಬಹರೇನ್ ಆಡಳಿತಕ್ಕೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಪ್ಯಾಲೆಸ್ತೀನ್ ವಿರೋಧಿಸಿ ಪೋಸ್ಟ್ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.


    ಡಾ.ಸುನಿಲ್‌ ರಾವ್ ಅವರು ರಾಯಲ್ ಹಾಸ್ಪಿಟಲ್ ಬೆನ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಗಿದ್ದರು. ಬಹರೇನ್ ಪೊಲೀಸರು ಬಂಧಿಸಿದ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಅವರನ್ನು ಹುದ್ದೆಯಿಂದ ತೆಗೆದು ಹಾಕಿದೆ ಎನ್ನಲಾಗಿದೆ. ಡಾ.ಸುನೀಲ್ ರಾವ್ ಅವರ ಪೋಸ್ಟ್ ನಮ್ಮ ಸಮುದಾಯಕ್ಕೆ ವಿರುದ್ಧವಾಗಿದೆ. ಅವರ ಸಿದ್ಧಾಂತ ನಮಗೆ ಒಪ್ಪಿತವಲ್ಲ. ಅದು ನಮ್ಮ ನಿಲುವಲ್ಲ ನಿಯಮ ಉಲ್ಲಂಘನೆ ಮಾಡಿದ್ದರಿಂದ ಕೆಲಸದಿಂದ ವಜಾ ಮಾಡಿದ್ದೇವೆ ಎಂದು ರಾಯಲ್ ಆಸ್ಪತ್ರೆ ಪ್ರತಿಕ್ರಿಯಿಸಿದೆ.
    ಕೆಲಸದಿಂದ ವಜಾಗೊಳಿಸುವ ಮುನ್ನ ಡಾ.ಸುನಿಲ್ ರಾವ್ ಅವರು ಕ್ಷಮೆ ಕೇಳಿದ್ದರು. ಬಹರೇನ್‌ನಲ್ಲಿ ಕಳೆದ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈ ದೇಶದ ಜನರನ್ನು, ಧರ್ಮವನ್ನು ಗೌರವಿಸುತ್ತೇನೆ. ಒಬ್ಬ ಡಾಕ್ಟರ್ ಆಗಿ ಸಾವು, ನೋವುಗಳ ಬಗ್ಗೆ ಮಾತನಾಡಿದ್ದೆ. ಭಾವನೆಗಳಿಗೆ ಧಕ್ಕೆಯಾದರೆ ಕ್ಷಮಿಸಿ ಎಂದು ಪೋಸ್ಟ್ ಮಾಡಿದ್ದರು. ಆದರೂ ಇದಕ್ಕೆ ಅಲ್ಲಿನ ಆಡಳಿತ ಮನ್ನಣೆ ನೀಡಿಲ್ಲ. ಮಂಗಳೂರಿನ ಕೆಎಂಸಿ ಕಾಲೇಜಿನಲ್ಲಿ ಎಂಡಿ ಮಾಡಿದ್ದ ಡಾ.ಸುನಿಲ್ ರಾವ್, ವಿಶಾಖಪಟ್ಟಣದಲ್ಲಿ ಎಂಬಿಬಿಎಸ್ ಪೂರೈಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply