LATEST NEWS
ಮಂಗಳೂರು – ಕಫೆಯೊಂದರಲ್ಲಿ ವಿಧ್ಯಾರ್ಥಿನಿಯರ ಪೈಟ್

ಮಂಗಳೂರು ಎಪ್ರಿಲ್ 05: ಮಂಗಳೂರಿನ ನಗರದ ಕಾಲೇಜಿನ ವಿಧ್ಯಾರ್ಥಿನಿಯರು ಕಫೆಯೊಂದರಲ್ಲಿ ಹೊಡೆದಾಡಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಬಾವುಟಗುಡ್ಡೆ ಬಳಿಯ ಕೆಫೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು. ಮೂವರು ವಿದ್ಯಾರ್ಥಿನಿಯರ ಹೊಡೆದಾಡಿಕೊಂಡಿದ್ದಾರೆ.

ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಆಗಮಿಸಿದ ಓರ್ವ ಯುವತಿ ಕುಳಿತಿದ್ದ ಯುವತಿಗೆ ಏಕಾಏಕಿ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಕೆಫೆಯಲ್ಲಿ ಕುಳಿತಿದ್ದ ಮತ್ತೊಬ್ಬ ಯುವತಿ ಗಲಾಟೆ ಆರಂಭಿಸಿದ್ದಾರೆ. ಹೀಗೆ ಒಟ್ಟು ಮೂವರು ಯುವತಿಯರ ನಡುವೆ ಹೊಡೆದಾಟ ಶುರುವಾಗಿದೆ. ಈ ಜಗಳ ಬಿಡಿಸಲು ಯುವಕರು ಪರದಾಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಜಗಳದ ವಿಡಿಯೋ ವೈರಲ್ ಆಗಿದೆ.