Connect with us

LATEST NEWS

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಛೇರಿ ಉದ್ಘಾಟನೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಛೇರಿ ಉದ್ಘಾಟನೆ

ಮಂಗಳೂರು ಎಪ್ರಿಲ್ 3: 2018ರ ವಿಧಾನಸಭೆ ಚುನಾವಣೆಯ ಪ್ರಯುಕ್ತ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟಿಸಲಾಯಿತು. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಕಳೆದ ನಾಲ್ಕುವರೆ ವರ್ಷಗಳಲ್ಲಿ ಸಾಕಷ್ಟು ಕೆಲಸಗಳು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಗಿದ್ದು, ಮಂಗಳೂರು ನಗರದಲ್ಲಿ ಶಾಂತಿ ಇದೆ. ಜನರು ನೆಮ್ಮದಿಯಿಂದ ಇದ್ದಾರೆ. ಎಲ್ಲಾ ಧರ್ಮಗಳನ್ನು ಒಟ್ಟು ಸೇರಿಸಿ ಸಾಮರಸ್ಯದ ಬದುಕನ್ನು ಕಾಪಪಾಡಿಕೊಳ್ಳುವುದೇ ಮುಖ್ಯವಾಗಿದೆ. ಶಾಂತಿಯ ಮೂಲಕ ಬಂಡವಾಳಗಳನ್ನು ಆಕರ್ಷಿಸಿ, ಯುವಕ ಯುವತಿಯರಿಗೆ ಉದ್ಯೋಗ ಸೌಲಭ್ಯ ನೀಡಬಹುದು.

ಇದರಿಂದ ಯುವಕರು ಹಾಗೂ ಯುವತಿಯರು ಪರವೂರಿಗೆ ಉದ್ಯೋಗಗಳನ್ನು ಹರಸಿ ಹೋಗುವುದನ್ನು ತಡೆಹಿಡಿಯಬಹುದು ಎಂದು ಹೇಳಿದರು. ಮಂಗಳೂರು ನಗರದ ಪ್ರಮುಖ ಉಧ್ಯಮ ಮೀನುಗಾರಿಕೆಗೆ ವಿಶೇಷವಾದ ಒತ್ತು ನೀಡಲಾಗಿದೆ. ಅದರೊಂದಿಗೆ ಬಂದರು ಅಭಿವೃದ್ಧಿಗೆ ಗಮನಹರಿಸಲಾಗಿದೆ. ಲಕ್ಷದ್ವೀಪದ ಜೊತೆಗೆ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು ಪ್ರತಿ ಬೂತ್ ನಲ್ಲಿ 25 ಜನ ಸದಸ್ಯರನ್ನು ನೇಮಿಸಿ ಚುನಾವಣೆ ಎದುರಿಸಲು ಸಧೃಡರಾಗಬೇಕೆಂದು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *