Connect with us

LATEST NEWS

ಅನಾಥಾಶ್ರಮದಲ್ಲಿ ಮುಖ್ಯಸ್ಥನಿಂದಲೇ ಸಣ್ಣ ಮಕ್ಕಳ ಮೇಲೆ ಲೈಂಗಿಕ ಕಿರುಕುಳ – ಆರೋಪಿ ಪೊಲೀಸ್ ಬಲೆಗೆ

ಮಂಗಳೂರು ಎಪ್ರಿಲ್ 6: ಅನಾಥಾಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಆಶ್ರಮದಲ್ಲಿದ್ದ ಸಣ್ಣಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಪೊಲೀಸ್ ಕಮೀಷನರ್​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.


ಬಂಧಿತ ಆರೋಪಿಯನ್ನು ಕೊಣಾಜೆ ನಿವಾಸಿ ಆಯೂಬ್ (52) ಎಂದು ಗುರುತಿಸಲಾಗಿದ್ದು, ಆರೋಪಿ ಮಂಗಳೂರಿನ ಉಳ್ಳಾಲದ ನೂರಾನಿ ಯತೀಂಖಾನ & ದಾರುಲ್ ಮಸಾಕಿನ್ ಸೆಂಟರ್​ನ ಮುಖ್ಯಸ್ಥನಾಗಿದ್ದು, 14 ವರ್ಷದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಸುಮಾರು ಎರಡು ತಿಂಗಳಿನಿಂದ ಕನಿಷ್ಠ ಐದು ಮಕ್ಕಳಿಗೆ ಈ ರೀತಿ ಕಿರುಕುಳ ನೀಡಿದ್ದಾಗಿ ಹೇಳಲಾಗಿದೆ.


ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಕೊರೊನಾ ಜಾಗೃತಿ ಕಾರ್ಯಕ್ರಮವಾಗಿ ನಗರದ ಟಿಎಂಎ ಪೈ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮ ಸಂಪೂರ್ಣ ಗೌಪ್ಯವಾಗಿ ನಡೆದಿದ್ದು, ಈ ಕಾರ್ಯಕ್ರಮವು ಕೆಟ್ಟ ಮತ್ತು ಉತ್ತಮ ಸ್ಪರ್ಶಗಳ ಬಗ್ಗೆ ಅರಿವು ಮೂಡಿಸಲು, ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಲು, ಮಗುವನ್ನು ಯಾವುದಾದರೂ ರೀತಿಯಲ್ಲಿ ದುರುಪಯೋಗಕ್ಕೆ ಒಳಪಡಿಸಲಾಗಿದೆಯೇ ಎಂದು ತಿಳಿಯಲು ಹಾಗೂ ಮಗುವಿನ ಜೊತೆ ಸಮಾಲೋಚನೆ ನಡೆಸಲು ಆಯೋಜಿಸಲಾಗಿತ್ತು, ಆದರೆ ಅನಾಥಾಶ್ರಮಗಳಿಗೆ ಮಾತ್ರ ಈ ಬಗ್ಗೆ ಮಾಹಿತಿ ನೀಡದೆ ಸಂಪೂರ್ಣ ಗೌಪ್ಯವಾಗಿ ನಡೆಸಲಾಗಿತ್ತು ಎಂದು ಕಮೀಷನರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಂಪಾಲದ ನೂರಾನಿ ಯತಿಮ್‌ ಖಾನಾ ದಾರುಲ್ ಮಸಕೀನ್‌ನಲ್ಲಿ 14 ವರ್ಷದ ಬಾಲಕ ಲೈಂಗಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾನೆ ಎಂದು ತಿಳಿದು ಬಂದಿದೆ. ಮೊದಲಿಗೆ ಬಾಲಕ ಸಮಸ್ಯೆಯ ಬಗ್ಗೆ ತಿಳಿಸಿದ. ಬಳಿಕ ಎರಡು ಸುತ್ತಿನ ಸಮಾಲೋಚನೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಆರು ಸಂಸ್ಥೆಗಳಲ್ಲಿ ಇಂತಹ 20 ನಿದರ್ಶನಗಳು ಬೆಳಕಿಗೆ ಬಂದವು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.  ಕುಂಪಲದ ಈ ಸಂಸ್ಥೆಯಲ್ಲೇ 4 ಪ್ರಕರಣಗಳು ದೊರೆತಿದೆ. ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *