LATEST NEWS
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಬಂದ್ – ಜಿಲ್ಲಾಧಿಕಾರಿ ಆದೇಶ

ಮಂಗಳೂರು ಎಪ್ರಿಲ್ 30: ಲಾಕ್ ಡೌನ್ ಸಂದರ್ಭದಲ್ಲೂ ಅತೀ ಹೆಚ್ಚು ಜನಜಂಗುಳಿ ಇರುತ್ದಿದ್ದ ಸೆಂಟ್ರಲ್ ಮಾರ್ಕೆಟ್ ನ್ನು ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಬಂದ್ ಮಾಡಿಸಿದ್ದಾರೆ.
ನಿನ್ನೆ ಲಾಕ್ ಡೌನ್ ಅಗತ್ಯ ವಸ್ತುಗಳ ಖರೀದಿ ಸಂದರ್ಭ ಅತೀ ಹೆಚ್ಚು ಜನ ಸೇರಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನಲೆ ಗರಂ ಆಗಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಇಂದಿನಿಂದ ಸೆಂಟ್ರಲ್ ಮಾರ್ಕೆಟ್ ಅನ್ನು ಸಂಪೂರ್ಣ ಬಂದ್ ಮಾಡಿದ್ದು ವ್ಯಾಪಾರಿಗಳಿಗೆ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಲು ಸೂಚಿಸಿದ್ದಾರೆ.

ಈ ಹಿನ್ನಲೆ ನಿನ್ನೆ ಜನರಿಂದ ತುಂಬಿ ತುಳುಕಿದ್ದ ಸೆಂಟ್ರಲ್ ಮಾರ್ಕೆಟ್ ಇಂದು ಬಿಕೋ ಎನ್ನುತ್ತಿದೆ. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ವ್ಯಾಪಾರ ನಡೆಸಿದ್ದ ವ್ಯಾಪಾರಸ್ಥರನ್ನು ಕಂಡು ಜಿಲ್ಲಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಮತ್ತೆ ಬೈಕಂಪಾಡಿ ಎಪಿಎಂಸಿಯಲ್ಲೇ ರಖಂ ವ್ಯಾಪಾರ ಮಾಡಲು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮಾರ್ಕೆಟ್ ಸುತ್ತ ಗೇಟ್ ಹಾಕಿ ಪೊಲೀಸರು ಬಂದ್ ಮಾಡಿಸಿದ್ದಾರೆ.