Connect with us

LATEST NEWS

ಲಾಕ್ ಡೌನ್ ಆದರೂ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಕೈ ಮುಗಿದು ಬುದ್ದಿವಾದ ಹೇಳುತ್ತಿರುವ ಟ್ರಾಫಿಕ್ ಪೊಲೀಸ್ ಎಸ್ ಐ ಖಾದರ್

ಉಡುಪಿ ಎಪ್ರಿಲ್ 30: ಕೊರೊನಾ ಲಾಕ್ ಡೌನ್ ಇದ್ದರೂ ಕೆಲವರು ಅನಗತ್ಯವಾಗಿ ತಿರುಗಾಡುತ್ತಿದ್ದು, ಪೊಲೀಸರ ಎಚ್ಚರಿಕೆಗೆ ಜನ ಕ್ಯಾರೆ ಅನ್ನದ ಹಿನ್ನಲೆ ಪೊಲೀಸ್ ಸಿಬ್ಬಂದಿಯೊಬ್ಬರು ಸಾರ್ವಜನಿಕರಿಗೆ ಕೈ ಮುಗಿದು ಬುದ್ದಿವಾದ ಹೇಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.


ಈ ಘಟನೆ ಉಡುಪಿಯಲ್ಲಿ ನಡೆದಿದ್ದು, ಟ್ರಾಫಿಕ್ ಪೊಲೀಸ್ ಎಸ್ ಐ ಖಾದರ್ ಅವರು ಅನಗತ್ಯವಾಗಿ ತಿರುಗಾಡುತ್ತಿರುವ ಜನರಿಗೆ ಕೈ ಮುಗಿದು ದಯವಿಟ್ಟು ಅನಗತ್ಯ ಓಡಾಟ ಮಾಡಬೇಡಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಬುದ್ದಿವಾದ ಹೇಳಿದ್ದಾರೆ.


ಪ್ರಮುಖ ರಸ್ತೆಯಲ್ಲಿ ಬ್ಯಾರಿಗೇಟ್ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದರೂ ಜನರು ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ಪೊಲೀಸರಿಗೆ ತಲೆ ನೋವು ತಂದಿದೆ. ಈಗಾಗಲೇ ಕೊರೊನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಶ್ರೀಮಂತ ಬಡವರು ಎನ್ನದೇ ಸಾವನ್ನು ಎಲ್ಲರಿಗೂ ತರುತ್ತಿದೆ.