LATEST NEWS
ಮತ್ತೆ ಭೂಕುಸಿತ – ಮಂಗಳೂರು ಬೆಂಗಳೂರು ರೈಲು ಹಾಸನದಲ್ಲೇ ಸ್ಥಗಿತ
ಬೆಂಗಳೂರು ಅಗಸ್ಟ್ 10: ಎಡಕುಮೇರಿ ಬಳಿ ಭೂಕುಸಿತದಿಂದಾಗಿ ಬಂದ್ ಆಗಿದ್ದ ಮಂಗಳೂರು ಬೆಂಗಳೂರು ರೈಲ್ವೆ ಮಾರ್ಗ ಕಳೆದ ಎರಡು ದಿನಗಳಿಂದ ಮತ್ತೆ ಸಂಚಾರ ಪ್ರಾರಂಭಿಸಿತ್ತು. ಇದೀಗ ಮತ್ತೆ ಸಕಲೇಶಪುರ ಹಾಗೂ ಬೈಲುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾದ ಕಾರಣ ಮತ್ತೆ ರೈಲು ಮಾರ್ಗ್ ಬಂದ್ ಆಗಿದೆ.
ಎರಡು ದಿನದ ಹಿಂದಷ್ಟೇ ಆರಂಭಗೊಂಡ ಮಂಗಳೂರು ಬೆಂಗಳೂರು ರೈಲು ಸೇವೆ ಮತ್ತೆ ಓಡಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಶುಕ್ರವಾರ ರಾತ್ರಿ ಹೊರಟಿದ್ದ ಬೆಂಗಳೂರು-ಕಣ್ಣೂರು (ರೈಲು ಸಂಖ್ಯೆ 16511) ಹಾಗೂ ಬೆಂಗಳೂರು-ಮುರುಡೇಶ್ವರ (ರೈಲು ಸಂಖ್ಯೆ 16585) ರೈಲುಗಳು ಸ್ಥಗಿತಗೊಂಡಿದೆ.
ಶನಿವಾರ ಮುಂಜಾವ ಸಕಲೇಶಪುರ ಹಾಗೂ ಬೈಲುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರ ರಾತ್ರಿ ಹೊರಟಿದ್ದ ಈ ಎರಡು ರೈಲುಗಳು ಹಾಸನ ಹಾಗೂ ಆಲೂರು ನಿಲ್ದಾಣದಲ್ಲಿ ಸ್ಥಗಿತವಾಗಿದೆ. ವೀಕೆಂಡ್‌ನಲ್ಲಿ ಊರಿಗೆ ಹೊರಟಿದ್ದ ಪ್ರಯಾಣಿಕರಿಗೆ ಭೂಕುಸಿತದಿಂದ ಆತಂಕ ಎದುರಾಗಿದೆ.
ರೈಲ್ವೆ ವಲಯವು ಸದ್ಯದ ಮಟ್ಟಿಗೆ ಪಡೀಲ್-ಹಾಸನ ಜಂಕ್ಷನ್ ನಡುವಿನ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿದೆ. ಈ ನಡುವೆ ಭೂಕುಸಿತವಾದ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮುಂದುವರೆದಿದ್ದು ಕೆಲವೇ ಹೊತ್ತಿನಲ್ಲಿ ರೈಲಿನ ಓಡಾಟ ಆರಂಭಗೊಳಿಸಲಾಗುವುದು ಎಂದು ಡಿಆರ್‌ಎಂ ಮೈಸೂರು ತನ್ನ ಅಧಿಕೃತ ಟ್ವೀಟ್ ಖಾತೆ (X ಖಾತೆ) ಮೂಲಕ ತಿಳಿಸಿದೆ.