Connect with us

    LATEST NEWS

    ಸೂತ್ರ ತಪ್ಪಿದ ಗಾಳಿಪಟದಂತೆ ಗಿರಕಿ ಹೊಡೆಯುತ್ತಾ ನೆಲಕ್ಕೆ ಬಿದ್ದ ವಿಮಾನ – 61 ಮಂದಿ ಧಾರುಣ ಸಾವು

    ಸಾವೊ ಪೌಲೊ ಅಗಸ್ಟ್ 10: ಬ್ರೆಜಿಲ್ ನಲ್ಲಿ ವಿಮಾನವೊಂದು ಜನವಸತಿ ಪ್ರದೇಶದ ಮೇಲೆ ಪತನಗೊಂಡಿದ್ದು, ಸುಮಾರು 61ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ. ಬ್ರೆಜಿಲ್‌ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


    ವೊಪಾಸ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯಿದ್ದರು. ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಕಸ್ಕಾವೇಲ್ ನಗರದಿಂದ ಸೌವೊ ಪೌಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ Voepass ಏರ್‌ಲೈನ್ಸ್‌ನ ATR-72 ವಿಮಾನ ವಿನೆದೊ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಪತನಗೊಂಡಿದೆ. ಇದರಿಂದ ಸಿಬ್ಬಂದಿ ಸೇರಿ 61 ಜನ ಮೃತಪಟ್ಟಿದ್ದಾರೆ.

    ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ನೇರವಾಗಿ ಚಲಿಸದೇ ಆಕಾಶದಲ್ಲೇ ಗಿರಕಿ ಹೊಡೆಯುತ್ತಾ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಆತಂಕಕಾರಿ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
    ಗಿರಕಿ ಹೊಡೆಯುತ್ತಾ ಪತನವಾದ ಬ್ರೆಜಿಲ್‌ನ ಈ ವಿಮಾನ ಪತನ ಪ್ರಪಂಚದ ವಿಮಾನಯಾನ ತಜ್ಞರಿಗೆ ಆಶ್ಚರ್ಯ ತರಿಸಿದೆ. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯದಿಂದ ಪೈಲಟ್‌ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಿರಬಹುದು ಎಂದು ಶಂಕಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply