Connect with us

    LATEST NEWS

    ಬಿಜೆಪಿ ಆಡಳಿತ ಪಾಲಿಕೆಯಿಂದ ಮಂಗಳೂರಿನ ಹೊಸ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್​ ಗೆ ಅವಕಾಶ

    ಮಂಗಳೂರು ನವೆಂಬರ್ 06: ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್​ ತೆರೆಯಲು ಅವಕಾಶ ನೀಡಲು ಮಹಾನಗರಪಾಲಿಕೆ ಯೋಜನೆ ರೂಪಿಸಿದ್ದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.


    114 ಕೋಟಿ ವೆಚ್ಚದಲ್ಲಿ ನೂತನ ಸೆಂಟ್ರಲ್ ‌ಮಾರ್ಕೆಟ್ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದ್ದು ನೂತ‌ನ ಸೆಂಟ್ರಲ್ ಮಾರ್ಕೆಟ್ ನ ಲೋವರ್ ಗ್ರೌಂಡ್ ಫ್ಲೋರ್ ನಲ್ಲಿ 9 ಭೀಫ್ ಸ್ಪಾಲ್ ತೆರೆಯಲು ನೀಲಿ ನಕ್ಷೆ ತಯಾರಾಗಿದೆ. ಸದ್ಯ ಸ್ಮಾರ್ಟ್ ಸಿಟಿ ಮಂಡಳಿ ಮುಂದಿರುವ ಮಾರ್ಕೆಟ್ ನ ತ್ರೀಡಿ ನಕಾಶೆಯಲ್ಲಿ 9 ಬೀಫ್ ಸ್ಟಾಲ್ ಗಳ ಬಗ್ಗೆ ಉಲ್ಲೇಖಿಸಿ ಮ್ಯಾಪ್ ರೆಡಿ ಮಾಡಲಾಗಿದೆ. ನೂತನ ಸೆಂಟ್ರಲ್ ‌ಮಾರ್ಕೆಟ್ ಕಟ್ಟಡ 18 ತಿಂಗಳಲ್ಲಿ ‌ನಿರ್ಮಾಣಗೊಳ್ಳಲಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣಗೊಂಡ ನಂತರ ಮಂಗಳೂರು ಪಾಲಿಕೆಯಿಂದಲೇ ಸ್ಟಾಲ್ ಗಳ ಏಲಂ. ಪ್ರಸ್ತಾವಿತ ಯೋಜನೆಯಲ್ಲಿ ಬೀಫ್ ಸ್ಟಾಲ್ ಗೆ ಅವಕಾಶ ಕೊಟ್ಟಿದ್ದಕ್ಕೆ ವಿಶ್ವಹಿಂದೂ ಪರಿಷತ್ ಕಿಡಿಕಾರಿದೆ.

    ರಾಜ್ಯ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದ್ರೆ ಈಗ ಅದೇ ಬಿಜೆಪಿ ಆಡಳಿತವಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಫ್ ಸ್ಟಾಲ್ ತೆರೆಯುವ ಯೋಜನೆ ಕೈಗೊಳ್ಳಲಾಗಿದೆ.  ತರಕಾರಿ, ಕೋಳಿ ಅಂಗಡಿಗಳ ಜೊತೆಗೆ ಬೀಫ್ ಸ್ಟಾಲ್ ಗೆ ಅವಕಾಶ ಅಂತ ಆಕ್ರೋಶ ಹೊರ ಹಾಕಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಬಳಿಕವೂ ಬಿಜೆಪಿಯಿಂದ ಬೀಫ್ ಸ್ಟಾಲ್ ಗೆ ಅವಕಾಶಕ್ಕೆ ಕೆಂಡಾಮಂಡಲವಾಗಿದೆ. ದ‌.ಕ ಜಿಲ್ಲೆಯಲ್ಲಿ 9 ಬೀಫ್ ಸ್ಟಾಲ್ ಗೆ ಅವಕಾಶ ಸರಿಯಲ್ಲ. ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಮಂಡಳಿ ತಕ್ಷಣ ಈ ಯೋಜನೆ ಕೈ ಬಿಡಬೇಕು. ಕೈ ಬಿಡದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ವಿಎಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply