LATEST NEWS
ಅನಿಶ್ಚಿತತೆಯಲ್ಲಿ ಮಂಗಳೂರು ಬೆಂಗಳೂರು ರೈಲು ಸಂಚಾರ
ಅನಿಶ್ಚಿತತೆಯಲ್ಲಿ ಮಂಗಳೂರು ಬೆಂಗಳೂರು ರೈಲು ಸಂಚಾರ
ಮಂಗಳೂರು ಅಗಸ್ಟ್ 19: ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಬೆಂಗಳೂರು ರೈಲು ಮಾರ್ಗದಲ್ಲಿ ಗುಡ್ಡ ಕುಸಿತ ಮುಂದುವರೆದಿದ್ದು, ಒಂದು ತಿಂಗಳ ಕಾಲ ರೈಲು ಸಂಚಾರ ಪುನರಾರಂಭ ಅಸಾಧ್ಯ ಎಂದು ಅಂದಾಜಿಸಲಾಗಿದ್ದು, ಮಂಗಳೂರು ಬೆಂಗಳೂರು ರೈಲು ಸಂಚಾರ ಅನಿಶ್ಚಿತತೆಯಲ್ಲಿ ಮುಂದುವರೆದಿದೆ.
ಬೆಂಗಳೂರು-ಮಂಗಳೂರು ರೈಲ್ವೆ ಹಳಿಯ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದು ಬಿದ್ದಿದ್ದು, ಕೆಲವು ರೈಲ್ವೇ ಹಳಿಗಳ ಮೇಲೆ ಬೃಹತ್ ಆಕಾರದ ಬಂಡೆಗಳು ಉರುಳಿ ಬಿದ್ದಿವೆ. ಹೀಗಾಗಿ ಕನಿಷ್ಟ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಸಕಲೇಶಪುರ ಪಟ್ಟಣದ ರೈಲ್ವೇ ನಿಲ್ದಾಣದಿಂದ ಯಡಕುಮರಿವರೆಗೆ ರೈಲ್ವೇ ಹಳಿ ಮೇಲೆ ವಿಪರೀತವಾಗಿ ಗುಡ್ಡಗಳು, ಬಂಡೆಗಳು ಕುಸಿತು ಬಿದ್ದಿವೆ. ಇದನ್ನು ತೆರವುಗೊಳಿಸಲು ಕೂಲಿ ಆಳುಗಳು ಸಿಗದೆ ರೈಲ್ವೇ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ಇದಲ್ಲದೆ ಹಾಸನ- ಮಂಗಳೂರು, ಮಡಿಕೇರಿ-ಹಾಸನ, ಸೋಮವಾರ-ಶನಿವಾರಸಂತೆಯ ಮಾರ್ಗಗಳಲ್ಲಿ ಬಿರುಗಾಳಿಗೆ ಭಾರೀ ಗಾತ್ರದ 100ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ದಕ್ಷಿಣಕನ್ನಡದಿಂದ ಬೆಂಗಳೂರು ಹಾಗೂ ಕೇರಳ ಕಡೆಗೆ ಸಂಚರಿಸುವ ಎಲ್ಲಾ ಪ್ರಮುಖ ರೈಲು ಮಾರ್ಗಗಳ ಓಡಾಟ ಕೂಡ ತೊಂದರೆಯಿಲ್ಲಿದೆ.