ಮಳೆಯಿಂದ ಭೂ ಕುಸಿತದಿಂದ ನಲುಗಿದ ಜೋಡುಪಾಳ ಪ್ರದೇಶಕ್ಕೆ ಜನಪ್ರತಿನಿಧಿಗಳ ಭೇಟಿ

ಮಂಗಳೂರು ಆಗಸ್ಟ್ 19: ಮಹಾಮಳೆಯಿಂದಾಗಿ ಗುಡ್ಡ ಕುಸಿತದಿಂದ ನಲುಗಿದ ಜೋಡುಪಾಳ ಪ್ರದೇಶಕ್ಕೆ ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರಿನಿಂದ ಸುಳ್ಯಕ್ಕೆ ತೆರಳಿದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಸುಳ್ಯ ಪ್ರವಾಸಿ ಮಂದಿರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕ ಅಂಗಾರ ಅವರನ್ನು ಭೇಟಿ ಮಾಡಿದರು.  ಭೇಟಿ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳ ಮಾಹಿತಿ ಪಡೆದರಲ್ಲದೇ ಜೋಡುಪಾಳ ಪ್ರದೇಶದಲ್ಲಿ ಉಂಟಾದ ಅನಾಹುತಗಳ ಬಗ್ಗೆ ಮಾಹಿತಿ ಕಲೆಹಾಕಿದರು.

ನಂತರ ಜೋಡುಪಾಳ ಪ್ರದೇಶಕ್ಕೆ ತೆರಳಿ ಹಾನಿಗೊಂಡ ಪ್ರದೇಶದ ಪರಿಶೀಲನೆ ನಡೆಸಿದರು. ನಂತರ ಸಂಪಾಜೆ ನೆರೆಪೀಡಿತ ಪ್ರದೇಶದಲ್ಲಿ ರಚಿಸಲಾಗಿರುವ ನಿರಾಶ್ರಿತರ ಶಿಬಿರಕ್ಕೆ ತೆರಳಿ ಮನೆ ಮಠ ಕಳೆದು ಕೊಡು ಸಂತ್ರಸ್ತರಾಗಿರುವ 240 ಜನರಿಗೆ ಸಾಂತ್ವನ ಹೇಳಿ ಅವರ ಆರೋಗ್ಯ ವಿಚಾರಿಸಿದರು.

Facebook Comments

comments