LATEST NEWS
ಡಿಆರ್ ಐ ಕಾರ್ಯಾಚರಣೆ 56 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ
ಡಿಆರ್ ಐ ಕಾರ್ಯಾಚರಣೆ 56 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ
ಮಂಗಳೂರು ಅಕ್ಟೋಬರ್ 13: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಡಿಆರ್ ಐ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಿನ್ದನವನ್ನು ಪತ್ತೆ ಹಚ್ಚಿದ್ದಾರೆ.
ಇಂದು ಮುಂಜಾನೆ ದುಬೈಯಿಂದ ಮಂಗಳೂರಿಗೆ ಬಂದ ನಾಲ್ಕು ಮಂದಿ ಪ್ರಯಾಣಿಕರನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದ ಡಿ ಆರ್ ಐ ಅಧಿಕಾರಗಳು ತೀವೃ ವಿಚಾರಣೆ ನಡೆಸಿದಾಗ ಈ ಚಿನ್ನ ಪತ್ತೆಯಾಗಿದೆ. ಅರೋಪಿಗಳಿಂದ ಸುಮಾರು 56 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ವಹೀದ್ , ಲಿಕಾಯತ್ ಅಲಿ, ಅತೀಕ್ ರೆಹಮಾನ್ , ಅಬ್ದುಲ್ ಖಾದರ್ ಎಂಬವರನ್ನು ಅಕ್ರಮ ಚಿನ್ನ ಸಾಗಾಟದ ಆರೋಪ ಮೇಲೆ ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.