LATEST NEWS
ಪ್ರಯಾಣಿಕರಿಲ್ಲದೆ ಬಣಗುಡುತ್ತಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಚೇತರಿಕೆ ಹಾದಿಯಲ್ಲಿ….!!
ಮಂಗಳೂರು ಅಗಸ್ಟ್ 19: ವಿಮಾನಗಳ ಹಾರಾಟವಿಲ್ಲದೆ ಬಣಗುಡುತ್ತಿದ್ದ ಮಂಗಳೂರು ವಿಮಾನ ನಿಲ್ದಾಣ ಇದೀಗ ಮತ್ತೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಮತ್ತೆ ಚೇತರಿಕೆಯ ಹಾದಿಯತ್ತ ಮರಳುತ್ತಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಎರಡು ತಿಂಗಳ ಹಿಂದೆ ದಿನಕ್ಕೆ ಒಂದೇ ವಿಮಾನ ಹಾರಾಟದಂತಹ ದಯನೀಯ ಸ್ಥಿತಿಗೆ ತಲುಪಿದ್ದ ಮಂಗಳೂರು ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣ ತಲುಪಿತ್ತು. ಆದರೆ ಇದೀಗ ಕೊವೀಡ್ ಕಾರಣದಿಂದ ಕಳೆದ ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ಯುಎಇ ವಿಮಾನ ಸಂಚಾರ ಬುಧವಾರದಿಂದ ಮತ್ತೆ ಪುನರಾಂಭವಾಗಿದೆ. ಬುಧವಾರ ಅಪರಾಹ್ನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಯುಎಇಗೆ ಹಾರಾಟ ಪ್ರಾರಂಭಿಸಿದೆ. ಈ ವಿಮಾನದಲ್ಲಿ ಕೇವಲ 5 ಮಂದಿ ಪ್ರಯಾಣಿಸಿದ್ದಾರೆ.
ಯುಎಇಗೆ ತೆರಳುವ ಪ್ರಯಾಣಿಕರು ವಿಮಾನ ಏರುವ ಆರು ಗಂಟೆಗಳೊಳಗೆ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ರ್ಯಾಪಿಡ್ ಆರ್‌ಟಪಿಸಿಆರ್ ಪರೀಕ್ಷೆಗೊಳಪಡಬೇಕಿದೆ. ಅದರಂತೆ ಪರೀಕ್ಷೆಯೊಂದಿಗೆ ಪ್ರಯಾಣಿಕರು ಯುಎಇಗೆ ಪ್ರಯಾಣ ಆರಂಭಿಸಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದ್ದು ಆಗಸ್ಟ್ ಮೊದಲ ಪಾಕ್ಷಿಕ ಅವಧಿಯನ್ನು ಜುಲೈ ಹಾಗೂ ಜೂನ್ಗೆ ಹೋಲಿಸಿದರೆ ಉತ್ತಮ ಪ್ರಗತಿಯಾಗಿದೆ.
ಜುಲೈ ಮೊದಲ 15 ದಿನಗಳ ಅವಧಿಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಮಂಗಳೂರಿನಿಂದ ತೆರಳಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.63ರಷ್ಟು ಏರಿಕೆ ದಾಖಲಾಗಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಎಲ್ಲ ಕ್ಷೇತ್ರಗಳೂ ಕೋವಿಡ್ ಲಾಕ್ಡೌನ್ನಿಂದ ತೆರೆದುಕೊಳ್ಳುತ್ತಿದ್ದು, ಸಂಚಾರ ಸಂಖ್ಯೆಯಲ್ಲಿ ಏರಿಕೆಗೆ ಕಾರಣ.