Connect with us

    LATEST NEWS

    ಹೆಲ್ಪ್..ಹೆಲ್ಪ್… ತಾಲಿಬಾನ್ ಬರ್ತಿದೆ..ಕಾಪಾಡಿ.. ಅಪ್ಘಾನ್ ಯುವತಿಯ ಕೂಗು

    ಕಾಬೂಲ್ : ತಾಲಿಬಾನ್ ಗಳ ಕಪಿಮುಷ್ಠಿಗೆ ಅಪ್ಘಾನ್ ದೇಶ ಬಂದಿದ್ದು, ತಾಲಿಬಾನ್ ಗಳ ಅಟ್ಟಹಾಸದಿಂದ ತಪ್ಪಿಸಿಕೊಳ್ಳಲು ಅಪ್ಘನ್ನರು ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಳಿ ಇರುವ ಅಮೇರಿಕದ ಸೇನೆಯವರೊಂದಿಗೆ ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ವೈರಲ್ ಆಗಿದೆ.


    ‘ತಾಲಿಬಾನ್‌ ಬರ್ತಿದೆ.. ಹೆಲ್ಪ್ ಮಿ.’ ಎಂದು ಬೇಲಿಯ ಹಿಂದೆ ಮಹಿಳೆಯೊಬ್ಬರು ರೋದಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕಾಬೂಲ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲಮಯ ಪರಿಸ್ಥಿತಿಯನ್ನು ಈ ವಿಡಿಯೊ ಬಿಂಬಿಸುವಂತಿದೆ.


    ಅಮೆರಿಕ ಸೇನಾ ಪಡೆಗಳು ಅಮೆರಿಕಾ ಹಾಗೂ ಇತರ ರಾಷ್ಟ್ರಗಳ ನಾಗರಿಕರನ್ನು ಅಪ್ಗನ್ ನಿಂದ ಹೊರ ಹೋಗಲು ಸಹಕಾರ ನೀಡುತ್ತಿವೆ. ಆದರೆ ತಾಲಿಬಾನ್ ಗಳ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಅಫ್ಗಾನಿಸ್ತಾನದ ಸಾವಿರಾರು ಜನರು ಗುಂಪು ಗುಂಪಾಗಿ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದಾರೆ ಹಾಗೂ ಅಮೆರಿಕ ವಾಯುಪಡೆ ವಿಮಾನಗಳನ್ನು ಏರಿದ್ದಾರೆ. ಅಮೆರಿಕ ಸೇನೆಯು ವಿಮಾನ ನಿಲ್ದಾಣದಲ್ಲಿ ಜನರ ಸಂಚಾರವನ್ನು ನಿಯಂತ್ರಿಸಿದ್ದು, ತಾಲಿಬಾನಿಗಳಿಂದ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply