KARNATAKA
ಮಂಡ್ಯ ದುರಂತಕ್ಕೆ ಕಾರಣವಾದ ಬಸ್ ನ ಮೂಲ ಮಂಗಳೂರು
ಮಂಡ್ಯ ದುರಂತಕ್ಕೆ ಕಾರಣವಾದ ಬಸ್ ನ ಮೂಲ ಮಂಗಳೂರು
ಮಂಗಳೂರು ನವೆಂಬರ್ 24: 30ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು ಎಂದು ತಿಳಿದು ಬಂದಿದೆ. ಇನ್ನೂ ಮಂಗಳೂರು ರೆಜಿಸ್ಟ್ರೇಶನ್ ನಂಬರ್ ನ್ನು ಈ ಬಸ್ ಹೊಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಖಾಸಗಿ ಬಸ್ ವಿಸಿ ನಾಲೆಗೆ ಉರುಳಿದ ಪರಿಣಾಮ ಸುಮಾರು 28 ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಈ ದುರಂತಕ್ಕೆ ಕಾರಣವಾದ ಬಸ್ ಮಂಗಳೂರು ಮೂಲದ್ದು ಎಂದು ತಿಳಿದು ಬಂದಿದೆ.
ಮೂರು ವರ್ಷದ ಹಿಂದೆ ಮಂಗಳೂರಿನಿಂದ ಬಸ್ ಮಾರಾಟ ಮಾಡಲಾಗಿತ್ತು . ರಾಜಕುಮಾರ್ ಹೆಸರಲ್ಲಿ ಇರುವ ಈ ಬಸ್ ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಆಗಿ ಬಳಸಲಾಗಿತ್ತು.
ಬರೋಬ್ಬರಿ 15 ವರ್ಷಗಳ ಕಾಲ ಮಂಗಳೂರಿನ ರಸ್ತೆಗಳಲ್ಲಿ ಈ ಖಾಸಗಿ ಬಸ್ ಓಡಾಟ ನಡೆಸಿರುವ ಮಾಹಿತಿ ಲಭ್ಯವಾಗಿದೆ. ರಾಜಕುಮಾರ ಹೆಸರಿನ ಈ ಬಸ್ ಈ ವರೆಗೆ ಎಂಟು ಮಾಲಕರ ಕೈ ಬದಲಾಗಿ ಮಂಡ್ಯದ ಶ್ರೀನಿವಾಸ್ ಎಂಬವರಿಗೆ 2015ರ ಎಪ್ರಿಲ್ 1ರಂದು ಮಾರಾಟವಾಗಿದೆ.
ಶಾಂಭವಿ ಗುಜರಾನ್ ಎಂಬವರ ಹೆಸರಲ್ಲಿದ್ದ ರಾಜಕುಮಾರ ಬಸ್ ನ ಈ ಹಿಂದಿನ ವಿಳಾಸ ಶಾಂಭವಿ ಗುಜರಾನ್, w/o ರಾಘವ ಕರ್ಕೇರಾ, 7-12-183, ಸುಲ್ತಾನ್ ಬತ್ತೇರಿ ರಸ್ತೆ, ಬೋಳೂರು, ಮಂಗಳೂರು ಆಗಿದೆ.
ಜೂನ್ 01, 2001ರಲ್ಲಿ ಶಂಕರ ವಿಠಲ ಕಂಪೆನಿ ಹೆಸರಲ್ಲಿ ಮೊದಲ ರಿಜಿಸ್ಟೇಷನ್ ಆಗಿದ್ದ ಬಸ್ ಆ ಬಳಿಕ ಮಂಗಳೂರಿನಲ್ಲೇ ಎಂಟು ಮಾಲಕರನ್ನು ಕಂಡಿತ್ತು.
ಕೊನೆಯದಾಗಿ ರೂಟ್ ನಂಬರ್ 16 ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ರೂಟ್ ನಲ್ಲಿ ಸಂಚಾರ ನಡೆಸಿದ್ದ ಬಸ್ ಗೆ 15 ವರ್ಷ ಮೇಲ್ಪಟ್ಟ ಕಾರಣ ಮತ್ತೆ ಪರ್ಮಿಟ್ ನೀಡದ ಮಂಗಳೂರು ಆರ್ ಟಿಓ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿತ್ತು. ಈ ಬಗ್ಗೆ ಮಂಗಳೂರು ಪ್ರಾದೇಶಿಕ ಸಾರಿಗೆ ಆಯುಕ್ತ ಜಾನ್.ಬಿ. ಮಿಸ್ಕತ್ ಮಾಹಿತಿ ನೀಡಿದ್ದಾರೆ.
ಬಸ್ ನ ಅವಧಿ ಮುಗಿದ ಕಾರಣ ಮಂಗಳೂರಿನ ಬಸ್ ಓನರ್ ಬಸ್ ನ್ನು ಮಾರಾಟ ಮಾಡಿದ್ದರು. ಬಸ್ ಪಿಟ್ನೇಸ್ 15 ಮೇ 2019ಕ್ಕೆ ಬಸ್ ಮುಗಿಯುವುದರಲ್ಲಿತ್ತು. ರಾಜಕುಮಾರ ಬಸ್ ಇನ್ನೂ ಮಂಗಳೂರು ನೊಂದಣಿ ಸಂಖ್ಯೆ ಕೆ ಎ 19ಎ, 5676 ಮುಂದುವರಿದಿತ್ತು.
ಈ ಬಸ್ 17 ವರ್ಷಗಳ ಹಿಂದೆ ಖರೀದಿಸಲಾಗಿದೆ. ಟಾಟಾ ಕಂಪನಿಯ ಬಸ್ ಇದಾಗಿದ್ದು, ಫಿಟ್‌ನೆಟ್ ಸರ್ಟಿಫಿಕೇಟ್ 15 ಮೇ 2019ರವರೆಗೂ ಇದೆ. ಜೊತೆಗೆ ಇನ್‌ಶ್ಯೂರೆನ್ಸ್ ಹಾಗೂ ಟ್ಯಾಕ್ಸ್ ವ್ಯಾಲಿಡಿಟಿಯೂ ಕೂಡ 15 ಮೇ 2019ರವರೆಗೂ ಇದೆ.