Connect with us

    KARNATAKA

    ಮಂಡ್ಯ ದುರಂತಕ್ಕೆ ಕಾರಣವಾದ ಬಸ್ ನ ಮೂಲ ಮಂಗಳೂರು

    ಮಂಡ್ಯ ದುರಂತಕ್ಕೆ ಕಾರಣವಾದ ಬಸ್ ನ ಮೂಲ ಮಂಗಳೂರು

    ಮಂಗಳೂರು ನವೆಂಬರ್ 24: 30ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು ಎಂದು ತಿಳಿದು ಬಂದಿದೆ. ಇನ್ನೂ ಮಂಗಳೂರು ರೆಜಿಸ್ಟ್ರೇಶನ್ ನಂಬರ್ ನ್ನು ಈ ಬಸ್ ಹೊಂದಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಖಾಸಗಿ ಬಸ್ ವಿಸಿ ನಾಲೆಗೆ ಉರುಳಿದ ಪರಿಣಾಮ ಸುಮಾರು 28 ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಈ ದುರಂತಕ್ಕೆ ಕಾರಣವಾದ ಬಸ್ ಮಂಗಳೂರು ಮೂಲದ್ದು ಎಂದು ತಿಳಿದು ಬಂದಿದೆ.

    ಮೂರು ವರ್ಷದ ಹಿಂದೆ ಮಂಗಳೂರಿನಿಂದ ಬಸ್ ಮಾರಾಟ ಮಾಡಲಾಗಿತ್ತು . ರಾಜಕುಮಾರ್ ಹೆಸರಲ್ಲಿ ಇರುವ ಈ ಬಸ್ ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಆಗಿ ಬಳಸಲಾಗಿತ್ತು.

    ಬರೋಬ್ಬರಿ 15 ವರ್ಷಗಳ ಕಾಲ ಮಂಗಳೂರಿನ ರಸ್ತೆಗಳಲ್ಲಿ ಈ ಖಾಸಗಿ ಬಸ್ ಓಡಾಟ ನಡೆಸಿರುವ ಮಾಹಿತಿ ಲಭ್ಯವಾಗಿದೆ. ರಾಜಕುಮಾರ ಹೆಸರಿನ ಈ ಬಸ್ ಈ ವರೆಗೆ ಎಂಟು ಮಾಲಕರ ಕೈ ಬದಲಾಗಿ ಮಂಡ್ಯದ ಶ್ರೀನಿವಾಸ್ ಎಂಬವರಿಗೆ 2015ರ ಎಪ್ರಿಲ್‌ 1ರಂದು ಮಾರಾಟವಾಗಿದೆ.

    ಶಾಂಭವಿ ಗುಜರಾನ್ ಎಂಬವರ ಹೆಸರಲ್ಲಿದ್ದ ರಾಜಕುಮಾರ ಬಸ್ ನ ಈ ಹಿಂದಿನ ವಿಳಾಸ ಶಾಂಭವಿ ಗುಜರಾನ್, w/o ರಾಘವ ಕರ್ಕೇರಾ, 7-12-183, ಸುಲ್ತಾನ್ ಬತ್ತೇರಿ ರಸ್ತೆ, ಬೋಳೂರು, ಮಂಗಳೂರು ಆಗಿದೆ.

    ಜೂನ್ 01, 2001ರಲ್ಲಿ ಶಂಕರ ವಿಠಲ ಕಂಪೆನಿ ಹೆಸರಲ್ಲಿ ಮೊದಲ ರಿಜಿಸ್ಟೇಷನ್ ಆಗಿದ್ದ ಬಸ್ ಆ ಬಳಿಕ ಮಂಗಳೂರಿನಲ್ಲೇ ಎಂಟು ಮಾಲಕರನ್ನು ಕಂಡಿತ್ತು.

    ಕೊನೆಯದಾಗಿ ರೂಟ್ ನಂಬರ್ 16 ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ರೂಟ್ ನಲ್ಲಿ ಸಂಚಾರ ನಡೆಸಿದ್ದ ಬಸ್ ಗೆ 15 ವರ್ಷ ಮೇಲ್ಪಟ್ಟ ಕಾರಣ ಮತ್ತೆ ಪರ್ಮಿಟ್ ನೀಡದ ಮಂಗಳೂರು ಆರ್ ಟಿಓ ಕ್ಲಿಯರೆನ್ಸ್ ಸರ್ಟಿಫಿಕೇಟ್ ‌ನೀಡಿತ್ತು. ಈ ಬಗ್ಗೆ ಮಂಗಳೂರು ಪ್ರಾದೇಶಿಕ ಸಾರಿಗೆ ಆಯುಕ್ತ ಜಾನ್.ಬಿ. ಮಿಸ್ಕತ್ ಮಾಹಿತಿ ನೀಡಿದ್ದಾರೆ.

    ಬಸ್ ನ ಅವಧಿ ಮುಗಿದ ಕಾರಣ ಮಂಗಳೂರಿನ ಬಸ್ ಓನರ್ ಬಸ್ ನ್ನು ಮಾರಾಟ ಮಾಡಿದ್ದರು. ಬಸ್ ಪಿಟ್ನೇಸ್ 15 ಮೇ 2019ಕ್ಕೆ ಬಸ್ ಮುಗಿಯುವುದರಲ್ಲಿತ್ತು. ರಾಜಕುಮಾರ ಬಸ್ ಇನ್ನೂ ಮಂಗಳೂರು ನೊಂದಣಿ ಸಂಖ್ಯೆ ಕೆ ಎ 19ಎ, 5676 ಮುಂದುವರಿದಿತ್ತು.

    ಈ ಬಸ್‌ 17 ವರ್ಷಗಳ ಹಿಂದೆ ಖರೀದಿಸಲಾಗಿದೆ. ಟಾಟಾ ಕಂಪನಿಯ ಬಸ್‌ ಇದಾಗಿದ್ದು, ಫಿಟ್‌ನೆಟ್‌ ಸರ್ಟಿಫಿಕೇಟ್‌ 15 ಮೇ 2019ರವರೆಗೂ ಇದೆ. ಜೊತೆಗೆ ಇನ್‌ಶ್ಯೂರೆನ್ಸ್‌ ಹಾಗೂ ಟ್ಯಾಕ್ಸ್‌ ವ್ಯಾಲಿಡಿಟಿಯೂ ಕೂಡ 15 ಮೇ 2019ರವರೆಗೂ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply