ಬಿಜೆಪಿಯವರು ರಾಜಕಾರಣಕ್ಕಾಗಿ ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದರು- ಜಿ. ಪರಮೇಶ್ವರ್

ಮಂಗಳೂರು ನವೆಂಬರ್ 24: ಬಿಜೆಪಿಯವರು ರಾಜಕಾರಣ ಮಾಡುವುದಕ್ಕಾಗಿ ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದರು. ಪ್ರತಿ ಬಾರಿ ಚುನಾವಣೆ ಹತ್ತಿರ ಬರುವಾಗ ರಾಮಮಂದಿರ ಬಗ್ಗೆ ರಾಜಕೀಯ ಮಾಡ್ತಾರೆ ಇದಕ್ಕೆ ಮುಂಬರುವ 2019 ರ ಚುನಾವಣೆಯಲ್ಲಿ ಮತದಾರ ಸ್ಪಷ್ಟ ಉತ್ತರ ನೀಡಲಿದ್ದಾನೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಜಿ. ಪರಮೆಶ್ವರ್ ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ದೇವರ ಹೆಸರಿನಲ್ಲಿ ಹಣ, ಇಟ್ಟಿಗೆ ಸಂಗ್ರಹಿಸಿದ್ದರು, ಅಲ್ಲದೆ ಪಾದಯಾತ್ರೆ ಕೂಡ ಮಾಡಿದ್ದರು, ಆದರೆ ರಾಮ ಮಂದಿರ ಮಾತ್ರ ಇನ್ನೂ ಹಾಗೆ ಇದೆ ಎಂದು ಹೇಳಿದರು.

VIDEO

1 Shares

Facebook Comments

comments