KARNATAKA
ಸ್ಟುಡಿಯೋ ಕ್ಲೀನ್ ಮಾಡುವಾಗ ಕರೆಂಟ್ ಹೊಡೆದು ಇಬ್ಬರು ಪೋಟೋಗ್ರಾಫರ್ ಸಾವು…!!

ಮಂಡ್ಯ ಅಕ್ಟೋಬರ್ 22: ದೀಪಾವಳಿ ಹಿನ್ನಲೆ ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದ ವೇಳೆ ಕರೆಂಟ್ ಹೊಡೆದು ಇಬ್ಬರು ಪೋಟೋಗ್ರಾಫರ್ ಗಳು ಸಾವನಪ್ಪಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ವಿವೇಕ್ ಮತ್ತು ಮಧುಸೂದನ್ ಎಂದು ಗುರುತಿಸಲಾಗಿದ್ದು, ಇವರು ಬೆಸಗರಹಳ್ಳಿಯ ಲಕ್ಷ್ಮೀ ಸ್ಟುಡಿಯೋದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಕ್ಲೀನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಟುಡಿಯೋದಲ್ಲಿದ್ದ ವೈಯರ್‌ನಲ್ಲಿ ಶಾರ್ಟ್‍ಸರ್ಕ್ಯೂಟ್ ಆಗಿ ಇಬ್ಬರು ಫೋಟೋಗ್ರಾಫರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಇಬ್ಬರು ಫೋಟೋಗ್ರಾಫರ್‌ಗಳ ದುರ್ಮರಣಕ್ಕೆ ಮಂಡ್ಯ ಜಿಲ್ಲೆಯ ಫೋಟೋಗ್ರಾಫರ್‌ಗಳು ಸಂತಾಪ ಸೂಚಿಸಿದ್ದಾರೆ. ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.