KARNATAKA
ಪರ ಸ್ತ್ರೀಯೊಂದಿಗೆ ಲಾಡ್ಜ್ಗೆ ಹೋಗಿದ್ದ ವಿವಾಹಿತ ಹೆಣವಾದ..!
ಚಿತ್ರದುರ್ಗ : ಪರ ಸ್ತ್ರೀಯೊಂದಿಗೆ ಲಾಡ್ಜ್ಗೆ ಹೋಗಿದ್ದ ವಿವಾಹಿತ ಚಿತ್ರದುರ್ಗದ ಲಾಡ್ಜ್ ಒಂದರಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ವಿವಾಹಿತ ಮಹಿಳೆಯೊಬ್ಬರ ಜೊತೆ ಗೋಪಾಲ ಲಾಡ್ಜ್ಗೆ ಬಂದಿದ್ದ. ಮೃತ ಗೋಪಾಲ್ಗೆ ಕಳೆದ ಒಂದು ವರ್ಷದ ಹಿಂದೆ ಹಾವೇರಿ ಮೂಲದ ಮಹಿಳೆಯೊಬ್ಬರ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಕಳೆದ 6 ತಿಂಗಳಿಂದ ಪರಸ್ಪರ ದೈಹಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಜುಲೈ 4ರಂದು ಮಧ್ಯಾಹ್ನ 3:11ಕ್ಕೆ ಸಿಟಿ ಬಸ್ ನಿಲ್ಲಾಣ ಸಮೀಪದ ಲಾಡ್ಜ್ಗೆ ಬಂದಿದ್ದರು. ಅದೇ ದಿನ ಸಂಜೆ ಲಾಡ್ಜ್ನಲ್ಲಿ ಗೋಪಾಲ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರೇಯಸಿ ಮಹಿಳೆ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನ ಮದುವೆಯಾಗಿದ್ದು ಇದೀಗ ಗೋಪಾಲನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.ಗೋಪಾಲ- ಪವಿತ್ರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಗೋಪಾಲ ಕುಟುಂಬ ಹೆಚ್ಚಿನ ತನಿಖೆಗೆ ಆಗ್ರಹಿಸಿದೆ. ಪೊಲೀಸರು ಪವಿತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.